ಹಿರಿಯಡಕ: ಸಮೀಪದ ಶೀರೂರು ಮೂಲ ಮಠದ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ರಾಮನವಮಿ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ ಸಹಿತ ವಿಶೇಷ ಪೂಜೆ, ಪವಮಾನ ಕಲಶ, ದೇವರ ಪಟ್ಟದ ಪೂಜೆ, ಮುಖ್ಯಪ್ರಾಣ ದೇವರ ಪೂಜೆ, ಪಲ್ಲ ಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಗಾಯಕ ಸಾಯಿ ವಿಘ್ನೇಶ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಸಂಜೆ ಕೃಷ್ಣಾಪುರ ಮಠದ ಯತಿ ವಿದ್ಯಾಸಾಗರತೀರ್ಥ ಸ್ವಾಮೀಜಿ ಪಟ್ಟದ ದೇವರೊಂದಿಗೆ ಕ್ಷೇತ್ರಕ್ಕೆ ಭೇಟಿ ನೀಡಿದರು. ಪ್ರಾಣದೇವರ ರಂಗಪೂಜೆ, ರಥೋತ್ಸವ, ಓಲಗ ಮಂಟಪ ಪೂಜೆ, ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಿತು.
18ರಂದು ಶಾಕಲ ಋಕ್ಸಂಹಿತಾ ಯಾಗದ ಪೂರ್ಣಾಹುತಿ, ಹಗಲು ರಥೋತ್ಸವ, ಓಲಗ ಮಂಟಪ ಪೂಜೆ, ಅವಭೃತ ಸ್ನಾನ, ನಡೆಯಲಿದೆ. ರಾತ್ರಿ ಮಠದ ಬೊಬ್ಬರ್ಯ ಕೋಲ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.