ADVERTISEMENT

ಶೀರೂರು ಮೂಲ ಮಠದಲ್ಲಿ ಸನ್ಯಾಸ ಸ್ವೀಕಾರ: ಧಾರ್ಮಿಕ ವಿಧಿ ಇಂದಿನಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 10 ಮೇ 2021, 19:45 IST
Last Updated 10 ಮೇ 2021, 19:45 IST
ಸೋದೆ ಶ್ರೀಗಳೊಂದಿಗೆ ಸನ್ಯಾಸಾಶ್ರಮ ಸ್ವೀಕರಿಸಲಿರುವ ಅನಿರುದ್ಧ ಸರಳತ್ತಾಯ ಹಾಗೂ ಅವರ ಮನೆಯವರು
ಸೋದೆ ಶ್ರೀಗಳೊಂದಿಗೆ ಸನ್ಯಾಸಾಶ್ರಮ ಸ್ವೀಕರಿಸಲಿರುವ ಅನಿರುದ್ಧ ಸರಳತ್ತಾಯ ಹಾಗೂ ಅವರ ಮನೆಯವರು   

ಹಿರಿಯಡಕ (ಉಡುಪಿ): ಶೀರೂರು ಮಠದ ನೂತನ ಯತಿಯ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮವು ಇಲ್ಲಿಗೆ ಸಮೀಪದ ಶೀರೂರು ಮೂಲ ಮಠದಲ್ಲಿ ಮೇ 11ರಿಂದ 14ರವರೆಗೆ ನಡೆಯಲಿದೆ.

ಶಿರಸಿ ತಾಲ್ಲೂಕಿನ ಸೋಂದಾ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲು ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು ಸಂಕಲ್ಪ ಮಾಡಿದ್ದರು. ಲಾಕ್‌ಡೌನ್ ಮಾರ್ಗಸೂಚಿಯಪಾಲನೆಗೆ, ಈ ಕಾರ್ಯಕ್ರಮವನ್ನು ಶೀರೂರು ಮೂಲ ಮಠಕ್ಕೆ ಸ್ಥಳಾಂತರಿಸಲಾಗಿದೆ.

ಸನ್ಯಾಸಾಶ್ರಮ ಸ್ವೀಕರಿಸಲಿರುವ ವಟುವು ಈಗಾಗಲೇ ಪೋಷಕರ ಜೊತೆಗೆ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ, ದೇವರ ದರ್ಶನ ಪೂರ್ಣಗೊಳಿಸಿದ್ದಾರೆ. ಉಡುಪಿಯ ಅಷ್ಟಮಠದ ಯತಿಗಳ ಆಶೀರ್ವಾದದೊಂದಿಗೆ ಫಲ ಮಂತ್ರಾಕ್ಷತೆ ಸ್ವೀಕರಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.