ಸಾಸ್ತಾನ (ಬ್ರಹ್ಮಾವರ): ಶರನ್ನವರಾತ್ರಿ ಉತ್ಸವ ಹಿಂದೂ ಧರ್ಮದ ತಳಹದಿಗೆ ಭದ್ರ ಬುನಾದಿಯಾಗಿದೆ ಎಂದು ಸಾಸ್ತಾನ ಸಿಎ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ ಪೂಜಾರಿ ಹೇಳಿದರು.
ಪಾಂಡೇಶ್ವರ ಕಳಿಬೈಲು ತುಳಸಿ ಅಮ್ಮ ಹಾಗೂ ಕೊರಗಜ್ಜ ಸಾನಿಧ್ಯ ಪರಿವಾರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ದೇಗುಲಗಳು ಧಾರ್ಮಿಕ ಚಿಂತನೆ ಪಸರಿಸುವ ಜೊತೆಗೆ ಸಾಂಸ್ಕೃತಿಕ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ದೇವಸ್ಥಾನದ ಮೊಕ್ತೇಸರ ಎಂ.ಸಿ. ಚಂದ್ರಶೇಖರ, ಮಾರ್ಗದರ್ಶಕ ಶಶಿಧರ ರಾವ್, ಸಾಮಾಜಿಕ ಚಿಂತಕ ಸುಧೀರ ಶೆಟ್ಟಿ ಕೆದೂರು, ಕೀರ್ತಿಶ್ ಪೂಜಾರಿ, ಬಾಲಾಜಿ ಭಜನಾ ಸಂಘದ ಅಧ್ಯಕ್ಷ ವಿಜಯ ಆಚಾರ್, ಹಿಂದೂ ಮುಖಂಡ ಸುಬ್ರಹ್ಮಣ್ಯ ಕಿರಿಮಂಜೇಶ್ವರ, ದೇಗುಲ ಪಾಕತಜ್ಞ ಸುದರ್ಶನ ಪೂಜಾರಿ, ಶಾರದೋತ್ಸವ ಸಮಿತಿ ಕೋಶಾಧಿಕಾರಿ ವಿಶ್ವನಾಥ ಆಚಾರ್, ಸಹ ಅರ್ಚಕ ರಮೇಶ ಸಾಸ್ತಾನ ಇದ್ದರು. ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು. ಪಾಂಡೇಶ್ವರ ಬಾಲಾಜಿ ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.