ADVERTISEMENT

ವೈಜ್ಞಾನಿಕ ಅಡಿಕೆ ಕೃಷಿ ಮಾಹಿತಿ ಕಾರ್ಯಕ್ರಮ ನಾಳೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 7:49 IST
Last Updated 13 ಅಕ್ಟೋಬರ್ 2024, 7:49 IST

ಪಡುಬಿದ್ರಿ: ಜಿಲ್ಲಾ ಕೃಷಿಕ ಸಂಘ ಆಯೋಜಿಸಿರುವ ವೈಜ್ಞಾನಿಕ ಅಡಿಕೆ ಬೇಸಾಯ ಕೃಷಿ ಮಾಹಿತಿ ಕಾರ್ಯಕ್ರಮ ಅ. 14ರಂದು ಸಂಜೆ 3.30ಕ್ಕೆ ಮುದರಂಗಡಿ ಮಾಣಿಯೂರು ರಾಜಾಪುರ ಸಾರಸ್ವತ ಸಮುದಾಯ ಭವನದಲ್ಲಿ ನಡೆಯಲಿದೆ.

ನಿವೃತ್ತ ಅಧ್ಯಾಪಕ ವೈ ಉಪೇಂದ್ರ ಪ್ರಭು ಉದ್ಘಾಟಿಸುವರು. ಮುದರಂಗಡಿ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಶಿಕುಮಾರ್ ಶೆಟ್ಟಿ ಸಾಂತೂರು ಮತ್ತು ಮಾಣಿಂಯೂರು ಕೃಷ್ಣರಾಜ ಹೆಗ್ಡೆ ಭಾಗವಹಿಸುವರು. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮತ್ತು ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಮಾಹಿತಿದಾರರಾಗಿ ಪಾಲ್ಗೊಳ್ಳುವರು.

ಕಡಿಮೆ ಖರ್ಚು, ಶ್ರಮ, ನೀರು-ಗೊಬ್ಬರ ಬಳಕೆಯಿಂದ ಲಾಭದಾಯಕವಾಗಿ ಅಡಿಕೆ ಕೃಷಿ ಮಾಡುವ ವಿಧಾನ, ನಾಟಿ, ನಿರ್ವಹಣೆ, ಕೀಟ-ರೋಗ ಬಾಧೆ ಹತೋಟಿ ಕ್ರಮಗಳನ್ನು ತಿಳಿಸಿಕೊಡಲಾಗುತ್ತದೆ ಎಂದು ಸಂಘಟಕರಾದ ಮುರಳೀಧರ ಪ್ರಭು, ಶಂಕರ ಕೇಂಜ ಮತ್ತು ಜೋನ್ ಅಮ್ಮಣ್ಣ ಮುದರಂಗಡಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.