ಉಡುಪಿ: ಜಿಲ್ಲೆಯ ಬೈಂದೂರು ತಾಲ್ಲೂಕಿನ ಮರವಂತೆಯಲ್ಲಿ ಮಂಗಳವಾರ ರಾತ್ರಿಯಿಂದ ಕಡಲ್ಕೊರೆತ ಆರಂಭವಾಗಿದ್ದು, ಪರಿಣಾಮ ತೀವ್ರ ಹಾನಿ ಉಂಟಾಗಿದೆ. ಮೀನುಗಾರಿಕೆಯ ಹೊರ ಬೈಂದೂರಿನ ಉತ್ತರ ಬ್ರೇಕ್ ವಾಟರ್‌ನ ತೀರದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಹಲವು ತೆಂಗಿನ ಮರ ಸಮುದ್ರದ ಪಾಲಾಗಿವೆ.
ರಭಸವಾದ ಅಲೆಗಳು ಅಪ್ಪಳಿಸಿದ ಪರಿಣಾಮ ಮೀನುಗಾರಿಕೆ ಶೆಡ್ ಕೂಡ ಕುಸಿದು ಬಿದ್ದಿದೆ. ಇನ್ನೊಂದು ಶೆಡ್ ಕೂಡ ಅಪಾಯದಲ್ಲಿದೆ.
ಇದೇ 14 ಮತ್ತು 15 ರಂದು ಚಂಡಮಾರುತದ ಮುನ್ಸೂಚನೆ ಮಾಹಿತಿ ಇದ್ದು, ಈ ಪ್ರದೇಶದ ಮೀನುಗಾರಿಕೆ, ರಸ್ತೆ, ಮೀನುಗಾರರ ಮನೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ.
ಈಗಾಗಲೇ ಸ್ಥಳೀಯರು ಹಾನಿ ವಿಡಿಯೊಗಳನ್ನು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹಾಗೂ ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.