ADVERTISEMENT

ಕಾರ್ಕಳ: ‘ತುಳುನಾಡ ಇತಿಹಾಸ ದರ್ಶನ’ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:13 IST
Last Updated 15 ಅಕ್ಟೋಬರ್ 2024, 14:13 IST
ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ತುಳುನಾಡ ಇತಿಹಾಸ ದರ್ಶನ ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಿತು
ಕಾರ್ಕಳ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ತುಳುನಾಡ ಇತಿಹಾಸ ದರ್ಶನ ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಿತು   

ಕಾರ್ಕಳ: ‘ತುಳುವರು ಅಕ್ಷರ ಜ್ಞಾನವಿಲ್ಲದೆಯೂ ಸುಂದರ ಇತಿಹಾಸ ಕಟ್ಟಿಕೊಟ್ಟವರು’ ಎಂದು ಬಂಟ್ವಾಳದ ಬಿ.ಸಿ.ರೋಡಿನ ವೀರರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯದ ಸಂಸ್ಥಾಪಕ ತುಕರಾಂ ಪೂಜಾರಿ ಹೇಳಿದರು.

ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ತುಳುನಾಡ ಇತಿಹಾಸ ದರ್ಶನ ಎಂಬ ಉಪನ್ಯಾಸ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ತುಳುನಾಡನ್ನು ಆಳಿದ ಅಬ್ಬಕ್ಕ ನಮ್ಮ ಸಾಧನೆಗೆ ಪ್ರೇರಕ ಶಕ್ತಿಯಿದ್ದಂತೆ. ಬುದ್ಧಿವಂತರಾದ ತುಳುವರು ಇತರರಿಂದ ಒಳ್ಳೆಯದನ್ನು ಪಡೆದು ಮರಳಿ ಒಳ್ಳೆಯದನ್ನೇ ಮಾಡುವವರು. ಮಹಾಕಾವ್ಯಗಳನ್ನು ಓದದಿದ್ದರೂ ಯಕ್ಷಗಾನದಂತಹ ಕಲೆಗಳ ಮೂಲಕವೇ ಅರಿತುಕೊಳ್ಳುವ ಸಂಸ್ಕೃತಿ ತುಳುವರಲ್ಲಿ ಬೆಳೆದುಬಂದಿದೆ’ ಎಂದರು

ADVERTISEMENT

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ಪ್ರಾಚಾರ್ಯ ಪ್ರಕಾಶ್ ಭಟ್ ಮಾತನಾಡಿ, ‘ತುಳುವ ಇತಿಹಾಸ ಅರಿತುಕೊಂಡು ನಾವು ಹಿರಿಯರ ಆದರ್ಶದಂತೆ ಬಾಳಿ ಬದುಕಬೇಕು’ ಎಂದರು.

ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಪ್ ಕಿಶೋರ್ ಲೋಬೊ ಇದ್ದರು. ವಿದ್ಯಾರ್ಥಿ ಚರಣ್‌ರಾಜ್ ಸ್ವಾಗತಿಸಿದರು. ಮನಿಟಾ ಮೈಕಲ್ ನಿರೂಪಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸುಕನ್ಯಾ ಜೈನ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಶ್ರೇಯಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.