ADVERTISEMENT

ರಸ್ತೆ ಬದಿ ಮಲಗಿದ ಭವಿಷ್ಯದ ಸೈನಿಕರು: ಜಾಲತಾಣಗಳಲ್ಲಿ ಆಕ್ರೋಶ

ಜಿಲ್ಲಾಡಳಿತದಿಂದ 6 ಕಡೆ ವಾಸ್ತವ್ಯಕ್ಕೆ ವ್ಯವಸ್ಥೆ: ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 16:23 IST
Last Updated 19 ಮಾರ್ಚ್ 2021, 16:23 IST
ಉಡುಪಿಯ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಬಂದಿದ್ದ ಯುವಕರು ಗುರುವಾರ ರಾತ್ರಿ ನಗರದ ಫುಟ್‌ಪಾತ್‌ನಲ್ಲಿ ಮಲಗಿದ್ದ ದೃಶ್ಯ.
ಉಡುಪಿಯ ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಬಂದಿದ್ದ ಯುವಕರು ಗುರುವಾರ ರಾತ್ರಿ ನಗರದ ಫುಟ್‌ಪಾತ್‌ನಲ್ಲಿ ಮಲಗಿದ್ದ ದೃಶ್ಯ.   

ಉಡುಪಿ: ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಹೊರ ಜಿಲ್ಲೆಗಳಿಂದ ಉಡುಪಿಗೆ ಬಂದಿದ್ದ ಯುವಕರು ಗುರುವಾರ ರಾತ್ರಿ ರಸ್ತೆ ಬದಿಗಳಲ್ಲಿ ಮಲಗಿದ್ದ ದೃಶ್ಯಕಂಡು ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗಿವೆ.

‘ಭವಿಷ್ಯದ ಸೈನಿಕರಿಗೆ ರಾತ್ರಿ ತಂಗಲು ವ್ಯವಸ್ಥೆ ಮಾಡದ ಜಿಲ್ಲಾಡಳಿತದ ಕ್ರಮ ಖಂಡನೀಯ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶ ಕಾಯಬೇಕಾದ ಯೋಧರು ರಸ್ತೆ ಬದಿಗಳಲ್ಲಿ ಸೊಳ್ಳೆ ಕಡಿಸಿಕೊಂಡು ಮಲಗುವುದು ಸರಿಯೇ’ ಎಂದು ಹಲವರು ಪ್ರಶ್ನಿಸಿದ್ದಾರೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೂಡ ಟ್ವಿಟ್ಟರ್‌ನಲ್ಲಿ ‘ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಆಹಾರ ಹಾಗೂ ವಾಸ್ತವ್ಯ ಹೂಡಲು ರಕ್ಷಣಾ ಸಚಿವಾಲಯ ಅಗತ್ಯ ವ್ಯವಸ್ಥೆ ಮಾಡಬೇಕಾಗಿತ್ತು. ದೇಶಸೇವೆಗೆ ಹೊರಟ ಯುವಕರನ್ನು ನಡೆಸಿಕೊಂಡ ರೀತಿ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ADVERTISEMENT

‘ಜಿಲ್ಲಾಧಿಕಾರಿ ಜತೆ ಈ ವಿಚಾರವಾಗಿ ಚರ್ಚಿಸಿದ್ದು, ಅಭ್ಯರ್ಥಿಗಳಿಗೆ ರಾತ್ರಿ ಮಲಗಲು ಅಗತ್ಯ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೆಲವು ಯುವಕರು ಅಲ್ಲಿ ಮಲಗದೆ ರಸ್ತೆ ಬದಿ ಮಲಗಿದ್ದಾರೆ. ಎಲ್ಲೆಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಅಭ್ಯರ್ಥಿಗಳಿಗೆ ತಿಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿರುವುದಾಗಿ’ ಪ್ರಮೋದ್ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.