ADVERTISEMENT

ಆಗುಂಬೆ ಘಾಟಿಯಲ್ಲಿ ಪ್ರಾಣಿಗಳಿಗೆ ಆಹಾರ ಎಸೆದವರಿಗೆ ದಂಡ

ರಸ್ತೆಯುದ್ದಕ್ಕೂ ಪ್ಲೇಕಾರ್ಡ್‌ ಹಿಡಿದು ಜಾಗೃತಿ ಮೂಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 15:58 IST
Last Updated 6 ಫೆಬ್ರುವರಿ 2021, 15:58 IST
ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಪ್ರಾಣಿಗಳಿಗೆ ಆಹಾರ ಎಸೆಯುವ ಹಾಗೂ ಪ್ಲಾಸ್ಟಿಕ್‌ ಬಿಸಾಡುವವರ ವಿರುದ್ಧ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿದ್ದು ದಂಡ ಹಾಕುತ್ತಿದೆ.
ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಪ್ರಾಣಿಗಳಿಗೆ ಆಹಾರ ಎಸೆಯುವ ಹಾಗೂ ಪ್ಲಾಸ್ಟಿಕ್‌ ಬಿಸಾಡುವವರ ವಿರುದ್ಧ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿದ್ದು ದಂಡ ಹಾಕುತ್ತಿದೆ.   

ಉಡುಪಿ: ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಪ್ರಾಣಿಗಳಿಗೆ ಆಹಾರ ಎಸೆಯುವ ಹಾಗೂ ಪ್ಲಾಸ್ಟಿಕ್‌ ಬಿಸಾಡುವವರ ವಿರುದ್ಧ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿದ್ದು, ಹಲವರಿಗೆ ದಂಡ ಹಾಕುತ್ತಿದೆ.

ಶನಿವಾರ ಸೋಮೇಶ್ವರದಿಂದ ಆಗುಂಬೆವರೆಗಿನ 10 ಕಿ.ಮೀ ವ್ಯಾಪ್ತಿಯಲ್ಲಿ ಹೆಬ್ರಿ, ಕಾರ್ಕಳ, ಅಮಾಸೆಬೈಲು ಹಾಗೂ ಸಿದ್ದಾಪುರ ವನ್ಯಜೀವಿ ವಿಭಾಗದ 40 ಸಿಬ್ಬಂದಿ ನಿಂತು, ಪ್ರಾಣಿಗಳಿಗೆ ಆಹಾರ ಹಾಕುವ ಹಾಗೂ ರಸ್ತೆಗೆ ಆಹಾರ ಪೊಟ್ಟಣ ಪ್ಲಾಸ್ಟಿಕ್ ಎಸೆಯುವ ವಾಹನ ಚಾಲಕರನ್ನು ಹಿಡಿದು ದಂಡ ಹಾಕಿತು. ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ₹ 50ರಿಂದ 200ರವರೆಗೆ ದಂಡ ವಿಧಿಸಲಾಯಿತು.

ದಂಡದ ಜತೆಗೆ ಘಾಟಿಯ ಹಲವೆಡೆ ಸಾರ್ವಜನಿಕರಿಗೆ ಮಾಹಿತಿ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಯಿತು. ಸಿದ್ದಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಗವಸ್‌ ದಾಸ್ ಕುಡ್ತಲ್‌ಕರ್, ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಅಮಾಸೆಬೈಲು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಇದ್ದರು.

ADVERTISEMENT

ಮನುಷ್ಯ ಸೇವಿಸುವ ಆಹಾರ ಹಾಗೂ ಜಂಕ್ ಫುಡ್‌ಗಳನ್ನು ಪ್ರಾಣಿಗಳಿಗೆ ನೀಡಿದರೆ ಅವುಗಳ ಆರೋಗ್ಯ ಕೆಡುತ್ತದೆ. ಆಹಾರ ಕ್ರಮಗಳನ್ನು ಬದಲಾಗಿ ಮನುಷ್ಯರು ಹಾಕುವ ಆಹಾರಕ್ಕೆ ಹೊಂದಿಕೊಳ್ಳುವ ಅಪಾಯ ವಿರುತ್ತದೆ. ಆಹಾರ ಸಿಗದಿದ್ದಾಗ ಜನರ ಮೇಲೆ ದಾಳಿ ನಡೆಸುವ ಅಪಾಯ ಇರುತ್ತದೆ. ರೋಗ ಹರಡುವಿಕೆಗೂ ಕಾರಣವಾಗಬಹುದು ಎಂದು ಹೆಬ್ರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.