ADVERTISEMENT

ಬ್ರಹ್ಮಾವರ: ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಸಂಸ್ಮರಣೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 4:51 IST
Last Updated 12 ಅಕ್ಟೋಬರ್ 2022, 4:51 IST
ಸಾಲಿಗ್ರಾಮದ ಆರಾಧನಾ ಮೆಲೋಡಿಸ್ ಸಾರಥ್ಯದಲ್ಲಿ ನಡೆದ ಎಸ್.ಪಿ. ಬಾಲಸುಬ್ರಮಣ್ಯಂ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆಯಿತು.
ಸಾಲಿಗ್ರಾಮದ ಆರಾಧನಾ ಮೆಲೋಡಿಸ್ ಸಾರಥ್ಯದಲ್ಲಿ ನಡೆದ ಎಸ್.ಪಿ. ಬಾಲಸುಬ್ರಮಣ್ಯಂ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆಯಿತು.   

ಸಾಲಿಗ್ರಾಮ(ಬ್ರಹ್ಮಾವರ): ಸಾಲಿಗ್ರಾಮದ ಆರಾಧನಾ ಮೆಲೋಡಿಸ್ ಸಾರಥ್ಯದಲ್ಲಿ ಎಸ್.ಪಿ. ಬಾಲ
ಸುಬ್ರಹ್ಮಣ್ಯಂ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆಯಿತು.

ಕಲಾಕೇಂದ್ರದ ಕೆ.ರಾಜಶೇಖರ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ, ಇಂತಹ ಕಲಾ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುವುದಲ್ಲದೆ, ಯುವ ಕಲಾವಿದರಿಗೆ ಸ್ಫೂರ್ತಿ ನೀಡುತ್ತವೆ ಎಂದರು.

ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಉದ್ಯಮಿ ಎಂ.ಸಿ ಚಂದ್ರಶೇಖರ್, ಮಂಗಳೂರಿನ ಕರ್ನಾಟಕ ಯಕ್ಷಧಾಮದ ಅಧ್ಯಕ್ಷ ಎಚ್‌.ಜನಾರ್ಧನ ಹಂದೆ, ಆರಾಧನಾ ಮೆಲೋಡಿಸ್ ಅಧ್ಯಕ್ಷ ಸತೀಶ್ ಭಾಗವತ್, ಆರಾಧನಾ ಮೆಲೋಡಿಸ್ ಕಾರ್ಯದರ್ಶಿ ಮನೋಜ್ ಗುಂಡ್ಮಿ, ಉಪಾಧ್ಯಕ್ಷ ಮಹೇಶ್ ಪಡುಕೆರೆ, ಗೌರವಾಧ್ಯಕ್ಷ ಅಚ್ಯುತ ಪೂಜಾರಿ ಇದ್ದರು.

ADVERTISEMENT

ನಂತರ ಎಸ್.ಪಿ. ಬಾಲಸುಬ್ರಮಣ್ಯಂ ಹಾಡಿರುವ ಗೀತೆಗಳನ್ನು ಯುವ ಗಾಯಕರಾದ ಸತೀಶ ಭಾಗವತ್, ಚಂದ್ರಕಾಂತ ನಾಯರಿ, ಮಹೇಶ ನಾಯರಿ, ಎಂ.ಸಿ ಚಂದ್ರಶೇಖರ್, ಗಾಯಕಿಯರಾದ ಶ್ರೀರಕ್ಷಾ ಗೋಪಾಡಿ, ಭಾರ್ಗವಿ ಹಂಗಾರಕಟ್ಟೆ, ಮೇಘನಾ ಕಾರ್ಕಡ, ಅರ್ಚನಾ ಗುಂಡ್ಮಿ, ದಿವ್ಯಾ ಹಂಗಾರಕಟ್ಟೆ, ನಾಗರತ್ನಾ ಮಾಬುಕಳ ಹಾಡಿದರು. ಪ್ರದೀಪ್ ಪುತ್ರನ್ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.