ADVERTISEMENT

ಉಡುಪಿ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 5:24 IST
Last Updated 2 ಆಗಸ್ಟ್ 2024, 5:24 IST
ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವಕ್ಕೆ ರಾಜಾಂಗಣದಲ್ಲಿ ಗುರುವಾರ ಚಾಲನೆ ನೀಡಲಾಯಿತು
ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವಕ್ಕೆ ರಾಜಾಂಗಣದಲ್ಲಿ ಗುರುವಾರ ಚಾಲನೆ ನೀಡಲಾಯಿತು   

ಉಡುಪಿ: ಕೃಷ್ಣನ ನಾಡಿನಲ್ಲಿ ಒಂದು ತಿಂಗಳ ಕಾಲ ಜನ್ಮಾಷ್ಟಮಿ ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಚಾರ. ಪ್ರತಿ ಮನೆ ಮನೆಗಳಲ್ಲೂ ಕೃಷ್ಣ ಲೀಲೋತ್ಸವ ನಡೆಯಲಿ ಎಂದು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವ ಕಾರ್ಯಕ್ರಮಕ್ಕೆ ರಾಜಾಂಗಣದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಈ ಕಾರ್ಯಕ್ರಮವನ್ನು ನೋಡಿ, ನಮ್ಮನ್ನು ಆಳುವವರಿಗೂ ಯಾರ ಜಯಂತಿಯನ್ನು ಆಚರಿಸಬೇಕು, ಯಾರ ಜಯಂತಿಯನ್ನು ಆಚರಿಸಬಾರದು ಎಂಬ ವಿವೇಚನಾ ಶಕ್ತಿ ಬಂದೀತು ಎಂದರು.

ADVERTISEMENT

ಕೃಷ್ಣನಿಗೆ ಎರಡು ಮುಖಗಳಿವೆ. ಒಂದು ಭಾರತದ ಕೃಷ್ಣ, ಇನ್ನೊಂದು ಭಾಗವತದ ಕೃಷ್ಣ. ಭಾಗವತದ ಕೃಷ್ಣ ಬಾಲ್ಯ ಲೀಲೆಗಳಿಂದ ಪ್ರಸಿದ್ಧನಾದರೆ. ಅಕ್ಕ ಪಕ್ಕದ ದೇಶಗಳು ನಮ್ಮ ಮೇಲೆ ದಾಳಿ ಮಾಡಿದರೆ ಅವರನ್ನು ಹೇಗೆ ಸದೆಬಡಿಯಬಹುದು ಎಂಬ ಸಂದೇಶವನ್ನು ಭಾರತದ ಕೃಷ್ಣ ನೀಡಿದ್ದಾನೆ ಎಂದು ಪ್ರತಿಪಾದಿಸಿದರು.

ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀ, ಭಂಡಾರಕೇರಿ ಮಠದ ವಿದ್ಯೇಶ ತೀರ್ಥ ಶ್ರೀ, ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಸುಶ್ರೀಂದ್ರ ತೀರ್ಥ ಶ್ರೀಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವದ ವೆಬ್‌ಸೈಟ್‌ ಉದ್ಘಾಟಿಸಲಾಯಿತು.

ಪ್ರಸಾದ್‌ರಾಜ್‌ ಕಾಂಚನ್‌, ತಲ್ಲೂರು ಶಿವರಾಮ ಶೆಟ್ಟಿ, ಎಚ್‌.ಎಸ್‌.ಬಲ್ಲಾಳ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.