ADVERTISEMENT

SSLC Result 2024 | ಬ್ರಹ್ಮಾವರ: 29 ಪ್ರೌಢಶಾಲೆಗಳಿಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 9 ಮೇ 2024, 13:13 IST
Last Updated 9 ಮೇ 2024, 13:13 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬ್ರಹ್ಮಾವರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವಲಯದ 59 ಪ್ರೌಢಶಾಲೆಗಳ ಪೈಕಿ 29 ಶಾಲೆಗಳು ಶೇ 100 ಫಲಿತಾಂಶ ಪಡೆದು ದಾಖಲೆ ಸೃಷಿಸಿವೆ.

ವಲಯದಿಂದ 2,806 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,643 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10 ಸರ್ಕಾರಿ, 9 ಅನುದಾನಿತ, 10 ಅನುದಾನ ರಹಿತ ಪ್ರೌಢಶಾಲೆಗಳು ಶೇ 100 ಫಲಿತಾಂಶ ದಾಖಲಿಸಿದ್ದು, ಶೇ 94.82 ಫಲಿತಾಂಶ ದಾಖಲಾಗಿದೆ.

ADVERTISEMENT

ಕೋಟ ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆ ಶೇ 100: ಪರೀಕ್ಷೆಗೆ ಹಾಜರಾದ ಕೋಟ ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ 135 ವಿದ್ಯಾರ್ಥಿಗಳಲ್ಲಿ 8 ಮಂದಿ 600ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. 55 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಶರ್ಮದಾ 616), ಅವನಿ ಪಿ. ತೋಳಾರ್ 615, ಆಕಾಶ್ ಕೆ.ವಿ.ಹೊಳ್ಳ 607, ಸಿಂಚನಾ ಎನ್.ಪೂಜಾರಿ 607, ಶ್ರೀಕಾಂತ್ ಉಡುಪ 605, ಸಾತ್ವಿಕ ಶ್ರೀಯಾನ್ 604, ಶರಧಿ 600, ಶಿಫಾಲಿ ಎಸ್. 600 ಅಂಕ ಗಳಿಸಿದ್ದಾರೆ.

ವಿವೇಕ ಬಾಲಕಿಯರ ಪ್ರೌಢಶಾಲೆಗೆ ಶೇ 100 ಫಲಿತಾಂಶ: ಕೋಟದ ವಿವೇಕ ಬಾಲಕಿಯರ ಫ್ರೌಡಶಾಲೆಯ ಪರೀಕ್ಷೆ ಬರೆದ 70 ವಿದ್ಯಾರ್ಥಿನಿಯರಲ್ಲಿ ಎಲ್ಲರೂ ತೇರ್ಗಡೆಯಾಗಿ ಶೇ 100 ಫಲಿತಾಂಶ ಬಂದಿತದೆ. ವೈಷ್ಣವಿ 589 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.