ಉಡುಪಿ: ‘ಭೂತ ಕೋಲ ಹಿಂದೂ ಧರ್ಮದ ಸಂಸ್ಕೃತಿಯಲ್ಲ’ ಎಂಬ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಾರ್ಕಳ ನಗರ ಠಾಣೆಗೆ ದೂರು ನೀಡಿದೆ.
ನಟ ಚೇತನ್ ಸಾಮಾಜಿಕ ಜಾಲತಾಣ ಹಾಗೂ ಟಿವಿ ಮಾಧ್ಯಮದಲ್ಲಿ ಹಿಂದೂ ಧರ್ಮಕ್ಕೆ, ದೈವ ದೇವರ ಆಚಾರ ವಿಚಾರಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕರಾವಳಿಯಲ್ಲಿ ಪುರಾತನ ಕಾಲದಿಂದಲೂ ಶ್ರದ್ಧೆ ಭಕ್ತಿಯಿಂದ ಹಿಂದೂಗಳು ದೈವ, ದೇವರು ಹಾಗೂ ಭೂತ ಕೋಲ ಆರಾಧಿಸಿಕೊಂಡು ಬರಲಾಗುತ್ತಿದೆ.
ನಟ ಚೇತನ್ ಹಿಂದೂ ಧರ್ಮದ ಆಚಾರ, ವಿಚಾರ, ನಂಬಿಕೆಗಳಿಗೆ ಧಕ್ಕೆಯಾಗುವಂತೆ ಮಾತನಾಡಿದ್ದು ಖಂಡನೀಯವಾಗಿದ್ದು ಕಾನೂನು ಕ್ರಮ ಜರುಗಿಸಬೇಕು. ಇಂತಹ ಹೇಳಿಕೆಗಳನ್ನು ನೀಡದಂತೆ ನಿರ್ಬಂಧ ವಿಧಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ದೂರಿನ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಕಳ ನಗರ ಠಾಣೆ ಪಿಎಸ್‌ಐ ನಟ ಚೇತನ್ ವಿರುದ್ಧ ಕಾನೂನು ಕ್ರಮಕ್ಕೆ ಹಿಂದೂ ಜಾಗರಣಾ ವೇದಿಕೆಯಿಂದ ದೂರು ಸಲ್ಲಿಕೆಯಾಗಿದ್ದು ಪರಿಶೀಲಿಸಲಾಗತ್ತಿದೆ. ಇದುವರೆಗೂ ಚೇತನ್ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದರು.
ಇವನ್ನೂ ಓದಿ...
*ಹಿಂದೂ, ಕ್ರಿಶ್ಚಿಯನ್, ಇಸ್ಲಾಂ ಆಮದು ಮಾಡಿಕೊಂಡ ಧರ್ಮಗಳು: ನಟ ಚೇತನ್ ಮತ್ತೆ ಕಿಡಿ
*ಭೂತ ಕೋಲ ಹಿಂದೂ ಸಂಸ್ಕೃತಿ: ರಿಷಬ್ ಶೆಟ್ಟಿ ಹೇಳಿಕೆ ಸುಳ್ಳೆಂದ ಚೇತನ್ 'ಅಹಿಂಸಾ'
*ಕಾಂತಾರದಿಂದ ದೊಡ್ಡ ಚಿತ್ರಗಳಿಗೆ ಹಾರ್ಟ್ ಅಟ್ಯಾಕ್: ರಿಷಬ್ ನಟನೆಗೆ ಆರ್ಜಿವಿ ಸಲಾಂ
*‘ಕಾಂತಾರ’ ನೋಡಿ ಅನುಷ್ಕಾ ಫಿದಾ: ರಿಷಬ್ ಶೆಟ್ಟಿಯನ್ನು ಕೊಂಡಾಡಿದ ಬಾಹುಬಲಿ ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.