ADVERTISEMENT

ವಿಕ್ರಂ ಗೌಡ ಎನ್‌ಕೌಂಟರ್‌ ಸ್ಥಳಕ್ಕೆ ಶರಣಾಗತಿ ಸಮಿತಿ ಸದಸ್ಯರ ಭೇಟಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 20:04 IST
Last Updated 23 ನವೆಂಬರ್ 2024, 20:04 IST
ನಾಡ್ಪಾಲಿನ ಪೀತುಬೈಲಿನಲ್ಲಿ ಎನ್‌ಕೌಂಟರ್‌ ನಡೆದ ಸ್ಥಳಕ್ಕೆ ಶನಿವಾರ ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯರಾದ ಶ್ರೀಪಾಲ್‌ ಕೆ.ಪಿ. ಮತ್ತು ಪಾರ್ವತೇಶ್ ಬಿಳಿದಾಳೆ ಭೇಟಿ ನೀಡಿದರು
ನಾಡ್ಪಾಲಿನ ಪೀತುಬೈಲಿನಲ್ಲಿ ಎನ್‌ಕೌಂಟರ್‌ ನಡೆದ ಸ್ಥಳಕ್ಕೆ ಶನಿವಾರ ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯರಾದ ಶ್ರೀಪಾಲ್‌ ಕೆ.ಪಿ. ಮತ್ತು ಪಾರ್ವತೇಶ್ ಬಿಳಿದಾಳೆ ಭೇಟಿ ನೀಡಿದರು   

ಹೆಬ್ರಿ (ಉಡುಪಿ): ನಾಡ್ಪಾಲಿನ ಪೀತುಬೈಲಿನಲ್ಲಿ ನಕ್ಸಲ್‌ ನಾಯಕ ಕೂಡ್ಲು ವಿಕ್ರಂ ಗೌಡನ ಎನ್‌ಕೌಂಟರ್‌ ನಡೆದ ಸ್ಥಳಕ್ಕೆ ‘ನಕ್ಸಲ್ ಪುನರ್‌ ವಸತಿ ಮತ್ತು ಶರಣಾಗತಿ ಸಮಿತಿ‘ ಸದಸ್ಯರಾದ ವಕೀಲ ಶ್ರೀಪಾಲ್‌ ಕೆ.ಪಿ. ಮತ್ತು ಪತ್ರಕರ್ತ ಪಾರ್ವತೀಶ ಬಿಳಿದಾಳೆ ಶನಿವಾರ ಭೇಟಿ ನೀಡಿದರು.

ಪೀತುಬೈಲಿನ ಆದಿವಾಸಿ ಕುಟುಂಬಗಳೊಂದಿಗೆ ಅವರು ಚರ್ಚಿಸಿದರು.

‘ನಕ್ಸಲರು ಶರಣಾಗತಿ ಬಯಸಿದರೆ ನಕ್ಸಲ್ ಪುನರ್ ವಸತಿ ಮತ್ತು ಶರಣಾಗತಿ ಸಮಿತಿ ಸದಸ್ಯರಾದ ನಮ್ಮನ್ನು ಸಂಪರ್ಕಿಸಬಹುದು. ಯಾರಾದರೂ ಮುಖ್ಯವಾಹಿನಿಗೆ ಬರುವುದಾದರೆ ಎಲ್ಲ ವ್ಯವಸ್ಥೆ ಮಾಡುತ್ತೇವೆ’ ಎಂದು ಶ್ರೀಪಾಲ್‌ ತಿಳಿಸಿದರು.

ADVERTISEMENT

ಪಾರ್ವತೀಶ ಬಿಳಿದಾಳೆ ಮಾತನಾಡಿ, ಈ ಕುರಿತು ಚರ್ಚಿಸಲು ಸರ್ಕಾರ ಶೀಘ್ರ ಸಭೆ ಕರೆಯಬೇಕು. ಆದಿವಾಸಿಗಳ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಸಭೆಯಲ್ಲಿ ಮಹತ್ತರ ಚರ್ಚೆ ನಡೆಸಬೇಕಾಗಿದೆ ಎಂದರು.

ಎನ್‌ಕೌಂಟರ್‌ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಗಳು ಕೇಳಿ ಬರುತ್ತಿದ್ದು, ಸರ್ಕಾರ ಅತಿ ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಶ್ರೀಪಾಲ್‌ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.