ಕುಂದಾಪುರ: ಕಳೆದ ಒಂದು ವಾರಗಳಿಂದ ಮಾನಸಿಕ ಖಿನ್ನತೆಯ ಕಾರಣಕ್ಕಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಕಿವುಡ ಮೂಗ ಯುವಕನೋರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಕೆಲ ದಿನಗಳಿಂದ ತಲ್ಲೂರು ಪರಿಸರದಲ್ಲಿ ತಿರುಗಾಡುತ್ತಿದ್ದ ಯುವಕನನ್ನು ಸ್ಥಳೀಯ ಆಟೋ ರಿಕ್ಷಾ ಚಾಲಕರು ಗಮನಿಸಿ, ಆತನನ್ನು ವಿಚಾರಿಸಿದಾಗ ಆತನಿಗೆ ಮಾತುಬಾರದಿರುವ, ಕಿವಿ ಕೇಳದೆ ಇರುವ ವಿಷಯ ತಿಳಿದು ಬಂತು. ಹೀಗಾಗಿ ಅವರಿಗೆ ಆತನ ಹೆಸರು, ಊರು, ವಿಳಾಸ ತಿಳಿಯಲು ಸಾಧ್ಯವಾಗಲಿಲ್ಲ. ಅಸ್ವಸ್ಥತೆಯಲ್ಲಿ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದ ಆತನಿಗೆ ಆಶ್ರಯ ಕಲ್ಪಿಸಿದ ಸ್ಥಳೀಯರು, ಬಳಿಕ ಈ ಕುರಿತು ಉಡುಪಿಯ ಸಾಮಾಜಿಕ ಕಾರ್ಯಕರ್ತ ನಮ್ಮ ಭೂಮಿಯ ರಾಮಾಂಜಿ ಅವರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಅವರು ಯುವಕನಿಗೆ ಕಾರ್ಕಳದ ಪಳ್ಳಿ ಎಂಬಲ್ಲಿರುವ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಕಲ್ಪಿಸುವಲ್ಲಿ ಸಹಕರಿಸಿದ್ದಾರೆ. ಆಶ್ರಮದ ಸಂಸ್ಥಾಪಕ ತನುಲಾ ತರುಣ್, ವಿನಯಚಂದ್ರ ಸಾಸ್ತಾನ, ಸ್ಥಳೀಯರಾದ ವಿಜಯ ಖಾರ್ವಿ, ಅನಿಲ್ ಖಾರ್ವಿ, ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.