ADVERTISEMENT

ಮಕ್ಕಳಿಗೆ ತುಳು ಸಂಸ್ಕೃತಿ ಮಹತ್ವ ತಿಳಿಸಿ: ಪೂರ್ಣಿಮಾ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 6:31 IST
Last Updated 7 ಜುಲೈ 2024, 6:31 IST
ತುಳು ಸಾಂಪ್ರದಾಯಿಕ ಸ್ಪರ್ಧೆ ‘ಮದರೆಂಗಿದ ರಂಗ್’ ಕಾರ್ಯಕ್ರಮ ಜರುಗಿತು
ತುಳು ಸಾಂಪ್ರದಾಯಿಕ ಸ್ಪರ್ಧೆ ‘ಮದರೆಂಗಿದ ರಂಗ್’ ಕಾರ್ಯಕ್ರಮ ಜರುಗಿತು   

ಉಡುಪಿ: ತುಳುನಾಡಿನ ಕಲೆ, ಸಂಸ್ಕೃತಿ, ಭಾಷೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕಾಗಿರುವುದು ಇಂದಿನ ಅಗತ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು.

ತುಳುಕೂಟ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ತುಳು ಸಾಂಪ್ರದಾಯಿಕ ಸ್ಪರ್ಧೆ ‘ಮದರೆಂಗಿದ ರಂಗ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರದಿಂದ ಮಾತ್ರ ತುಳು ಭಾಷೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ತುಳು ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತುಳುವನ್ನು ಉಳಿಸಿ, ಬೆಳೆಸಬಹುದಾಗಿದೆ ಎಂದರು.

ADVERTISEMENT

ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಡುಪಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಫರ್ಝಾನಾ ಎಂ., ಉದ್ಯಮಿ ರಮಿತಾ ಶೈಲೇಂದ್ರ ಕಾರ್ಕಳ ಮಾತನಾಡಿದರು.

ವೈದ್ಯೆ ಡಾ.ಶ್ರುತಿ ಬಲ್ಲಾಳ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಸಂಚಾಲಕಿ ಯಶೋಧ ಕೇಶವ ಸ್ಪರ್ಧೆ ಬಗ್ಗೆ ಮಾತನಾಡಿದರು.

ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು.

ಪ್ರಕಾಶ್ ಸುವರ್ಣ ಕಟಪಾಡಿ ಹಾಗೂ ಶಿಲ್ಪಾ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪೀಂಪಿರಿ ಊದುವ, ಹಲಸಿನ ಹಣ್ಣಿನ ಬೀಜದ ಸಿಪ್ಪೆ ತೆಗೆಯುವ, ಮದರಂಗಿ, ಔಷಧದ ಎಲೆಯ ಹೆಸರು ಬರೆಯುವ, ತೆಂಗಿನ ಗರಿಯಲ್ಲಿ ಆಟಿಕೆ ತಯಾರಿಸುವ, ಕೇಶಾಲಂಕಾರ, ಮುಂಡಾಸು ಕಟ್ಟುವ, ಹೂ ಕಟ್ಟುವ, ಜಲ್ಲಿ ಬಿಡಿಸುವ, ಬತ್ತಿ ಕಟ್ಟುವ, ಹೂ ಜೋಡಣೆ ಮಾಡುವ ಸ್ಪರ್ಧೆಗಳು ಮತ್ತು ತುಳು ರಸಪ್ರಶ್ನೆ ಮತ್ತು ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.