ADVERTISEMENT

ಕಾಂತಾರ-2 ಮುಹೂರ್ತ: ಕಾಂತಾರದ ಮುನ್ನುಡಿ ಹೇಳಲು ಹೊರಟಿರುವೆ ಎಂದ ನಟ ರಿಷಬ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 8:03 IST
Last Updated 28 ನವೆಂಬರ್ 2023, 8:03 IST
<div class="paragraphs"><p>ಕುಂದಾಪುರ ಸಮೀಪದ ಕುಂಭಾಸಿಯ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಕಾಂತಾರ-2 ಚಲನಚಿತ್ರದ ಮುಹೂರ್ತ ಪೂಜೆ ವೇಳೆ ರಿಷಬ್ ಶೆಟ್ಟಿ ಅವರ ಪುತ್ರಿ ರಾಧ್ಯಾ ರಿಷಬ್ ಶೆಟ್ಟಿ ಅವರು ಕ್ಯಾಮರಾ ಸ್ವೀಚ್‌ಗೆ ಚಾಲನೆ ನೀಡಿದರು</p></div>

ಕುಂದಾಪುರ ಸಮೀಪದ ಕುಂಭಾಸಿಯ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಕಾಂತಾರ-2 ಚಲನಚಿತ್ರದ ಮುಹೂರ್ತ ಪೂಜೆ ವೇಳೆ ರಿಷಬ್ ಶೆಟ್ಟಿ ಅವರ ಪುತ್ರಿ ರಾಧ್ಯಾ ರಿಷಬ್ ಶೆಟ್ಟಿ ಅವರು ಕ್ಯಾಮರಾ ಸ್ವೀಚ್‌ಗೆ ಚಾಲನೆ ನೀಡಿದರು

   

ಕುಂದಾಪುರ (ಉಡುಪಿ): ಕನ್ನಡ ಚಿತ್ರರಂಗದಲ್ಲಿ ದಾಖಲೆ ಮಾಡಿರುವ ಕಾಂತಾರ ಚಿತ್ರ ತಂಡದಿಂದ ನಿರ್ಮಿಸಲಾಗುತ್ತಿರುವ ಕಾಂತಾರ-2 ಚಿತ್ರಕ್ಕೆ ಸೋಮವಾರ ಕುಂಭಾಸಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ‘ಮುಂದುವರಿದ ಪಯಣ, ಕಾಂತಾರದ ಮುನ್ನುಡಿಯನ್ನು ಹೇಳಲಿಕ್ಕೆ ಹೊರಟಿದ್ದೇನೆ. ಅದ್ಭುತ ಸಿನಿಮಾ ನೀಡಲು ಇಡೀ ಚಿತ್ರ ತಂಡ ಕೆಲಸ ಮಾಡಲಿದೆ’ ಎಂದರು.

ADVERTISEMENT

‘ಹೊಂಬಾಳೆ ಫಿಲಂಸ್‌ ಸಂಸ್ಥೆಯವರು ನಂಬಿದ ಕ್ಷೇತ್ರ ಆನೆಗುಡ್ಡೆ, ನನಗಂತೂ ಆನೆಗುಡ್ಡೆ ಅದೃಷ್ಟದ ಬಾಗಿಲು. ಕಳೆದ ಬಾರಿ ಕಾಂತಾರ–1 ಅಧ್ಯಾಯಕ್ಕೂ ಇಲ್ಲಿಯೇ ಮುಹೂರ್ತ ಮಾಡಿದ್ದೆವು. ಅದೇ ರೀತಿ ಈ ಬಾರಿಯೂ ಆನೆಗುಡ್ಡೆ ಗಣಪತಿ ಆಶೀರ್ವಾದದೊಂದಿಗೆ ಪ್ರಾರಂಭ ಮಾಡಿದ್ದೇವೆ’ ಎಂದು ಹೇಳಿದರು.

ಕರಾವಳಿ ಭಾಗಕ್ಕೆ ಸಂಬಂಧಿಸಿದ ಕಥೆಯಾಗಿರುವುದರಿಂದ ಬಹುತೇಕ ಈ ಭಾಗದಲ್ಲೇ ಚಿತ್ರೀಕರಣ ಆಗುವ ಸಾಧ್ಯತೆಗಳಿವೆ. ಚಿತ್ರದ ಕಲಾವಿದರ ಆಯ್ಕೆ ನಡೆಯುತ್ತಿದೆ. ಕನ್ನಡಿಗರೇ ಕಾಂತಾರವನ್ನು ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರಿಂದ, ಕನ್ನಡದ ಕಲಾವಿದರಿಗೆ ಪ್ರಥಮ ಆದ್ಯತೆ. ಹಿಂದಿನಂತೆ ಸ್ಥಳೀಯರ ಜೊತೆ, ನಾಡಿನ ಇತರ ಭಾಗದ ಹೊಸ ಪ್ರತಿಭೆಗಳನ್ನು ಪರಿಗಣಿಸುವ ಯೋಚನೆ ಇದೆ. ಹೊಂಬಾಳೆ ಸಂಸ್ಥೆ, ವಿಜಯ್ ಕಿರಗಂದೂರು ಅವರ ಕಾರಣದಿಂದ ಕಾಂತಾರ ಸಿನಿಮಾ ದೊಡ್ಡಮಟ್ಟಕ್ಕೆ ಹೋಗಿದೆ. ಬಹುತೇಕ ಕಾಂತಾರ ಚಿತ್ರದ ತಾಂತ್ರಿಕ ತಂಡವೇ ಮುಂದುವರಿಯಲಿದೆ ಎಂದು ತಿಳಿಸಿದರು.

ದೇವಸ್ಥಾನದ ವತಿಯಿಂದ ನಟ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಅವರನ್ನು ಗೌರವಿಸಲಾಯಿತು.

ಕುಂದಾಪುರ ಸಮೀಪದ ಕುಂಭಾಸಿಯ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸೋಮವಾರ  ಕಾಂತಾರ-2 ಚಲನಚಿತ್ರದ ಮುಹೂರ್ತ ಪೂಜೆ ನಡೆಯಿತು. ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರು, ಚಲುವೇ ಗೌಡ ಮುಂತಾದವರು ಇದ್ದರು

ಕುಂದಾಪುರ ಸಮೀಪದ ಕುಂಭಾಸಿಯ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಕಾಂತಾರ-2 ಚಲನಚಿತ್ರದ ಮುಹೂರ್ತ ಪೂಜೆ ವೇಳೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಕ್ಲಾಪ್ ಬೋರ್ಡ್ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.