ಹೆಬ್ರಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವ್ಯಾಪ್ತಿಗೊಳಪಡುವ 41 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅವಧಿ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಂಡಿದೆ. ನಿಯಮಗಳ ಪ್ರಕಾರ ದೇಗುಲದ ಅರ್ಚಕರಿಗೆ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗುವ ಅಧಿಕಾರ ಇಲ್ಲದಿರುವುದು ನೇಮಕಾತಿ ಪ್ರಕ್ರಿಯೆ ಕುತೂಹಲ ಕೆರಳಿಸಿದೆ.
ಜಿಲ್ಲೆಯಲ್ಲಿ ‘ಬಿ’ ಕೆಟಗರಿಗೆ ಸೇರಿದ ಬ್ರಹ್ಮಾವರ ತಾಲ್ಲೂಕಿನ 2, ಕಾಪುವಿನ 2, ಉಡುಪಿಯ 2, ಕಾರ್ಕಳದ 2 ಮತ್ತು ಕುಂದಾಪುರ ತಾಲ್ಲೂಕಿನ 5 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅವಧಿ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಂಡಿದೆ.
‘ಸಿ’ ಕೆಟಗರಿಗೆ ಸೇರಿರುವ ಉಡುಪಿ ತಾಲ್ಲೂಕಿನ 19, ಬ್ರಹ್ಮಾವರದ 36, ಕುಂದಾಪುರ 36, ಬೈಂದೂರಿನ 9, ಕಾರ್ಕಳದ 17, ಹೆಬ್ರಿಯ 10 ದೇವಸ್ಥಾನಗಳ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅವಧಿಯು 2024 ಹಾಗೂ 2025ರಲ್ಲಿ ಮುಕ್ತಾಯಗೊಳ್ಳಲಿದೆ.
‘ಸಿ’ ಕೆಟಗರಿಗೆ ಸೇರಿದ ಕಾರ್ಕಳ ತಾಲ್ಲೂಕಿನ 10 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅವಧಿಯು ಮಾರ್ಚ್‌ಗೆ ಅಂತ್ಯಗೊಂಡಿದ್ದು, ಅಕ್ಟೋಬರ್‌ಗೆ 2, 2025ರ ಜನವರಿಗೆ 2, ಏಪ್ರಿಲ್‌ಗೆ 1 ಮತ್ತು ಜುಲೈನಲ್ಲಿ 2 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅವಧಿಯು ಮುಕ್ತಾಯಗೊಳ್ಳಲಿದೆ.
ಹೆಬ್ರಿ ತಾಲ್ಲೂಕಿನಲ್ಲಿ ‘ಸಿ’ ಕೆಟಗರಿಗೆ ಸೇರಿದ 3 ದೇವಸ್ಥಾನಗಳ ಅವಧಿ ಮಾರ್ಚ್‌ಗೆ ಮುಕ್ತಾಯಗೊಂಡಿದೆ. ಅಕ್ಟೋಬರ್‌ನಲ್ಲಿ 1, 2025ರ ಎಪ್ರಿಲ್‌ನಲ್ಲಿ 5 ಹಾಗೂ ಜುಲೈನಲ್ಲಿ 1 ದೇವಸ್ಥಾನದ ಸಮಿತಿಯ ಅವಧಿ ಕೊನೆಗೊಳ್ಳಲಿದೆ. ಕಾಪು ತಾಲ್ಲೂಕಿನ ‘ಸಿ’ ಕೆಟಗರಿಯ 7 ದೇವಸ್ಥಾನಗಳ ಸಮಿತಿಯ ಅವಧಿ ಅಕ್ಟೋಬರ್‌ನಲ್ಲಿ ಹಾಗೂ ಜನವರಿಯಲ್ಲಿ 3 ದೇವಸ್ಥಾನಗಳ ಸಮಿತಿ ಅವಧಿ ಕೊನೆಯಾಗಲಿದೆ.
ಉಡುಪಿ ತಾಲ್ಲೂಕಿನ 2 ದೇವಸ್ಥಾನದ ಸಮಿತಿಯ ಅವಧಿ ಮಾರ್ಚ್‌ಗೆ ಮುಕ್ತಾಯಗೊಂಡಿದ್ದು ಇದೇ ಅಕ್ಟೋಬರ್‌ನಲ್ಲಿ 7, 2025ರ ಜನವರಿಯಲ್ಲಿ 10 ದೇವಸ್ಥಾನಗಳ ಸಮಿತಿ ಮುಕ್ತಾಯವಾಗಲಿದೆ.
ಬ್ರಹ್ಮಾವರ ತಾಲ್ಲೂಕಿನ ‘ಸಿ’ ಕೆಟಗರಿಯ 19 ದೇವಸ್ಥಾನಗಳ ಸಮಿತಿ ಮಾರ್ಚ್‌ಗೆ ಮುಕ್ತಾಯಗೊಂಡಿದ್ದು, ಅಕ್ಟೋಬರ್‌ನಲ್ಲಿ 5, ಜನವರಿಯಲ್ಲಿ 4, ಏಪ್ರಿಲ್‌ನಲ್ಲಿ 5 ಮತ್ತು ಜುಲೈನಲ್ಲಿ 3 ದೇವಸ್ಥಾನಗಳ ಸಮಿತಿ ಅವಧಿಯು ಕೊನೆಗೊಳ್ಳಲಿದೆ.
ಕುಂದಾಪುರ ತಾಲ್ಲೂಕಿನ ‘ಸಿ’ ಕೆಟಗರಿಯ 4 ದೇವಸ್ಥಾನಗಳ ಸಮಿತಿ ಅವಧಿ ಮಾರ್ಚ್‌ಗೆ ಅಂತ್ಯವಾಗಿದ್ದು ಅಕ್ಟೋಬರ್‌ನಲ್ಲಿ 9, ಮುಂದಿನ ಜನವರಿಯಲ್ಲಿ 3, ಏಪ್ರಿಲ್‌ನಲ್ಲಿ 8, ಜುಲೈನಲ್ಲಿ 6 ಮತ್ತು ನವೆಂಬರ್‌ನಲ್ಲಿ 2 ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅವಧಿಯು ಕೊನೆಗೊಳ್ಳಲಿದೆ.
ಬೈಂದೂರು ತಾಲ್ಲೂಕಿನ ‘ಸಿ’ ಕೆಟಗರಿಯ 3 ದೇವಸ್ಥಾನಗಳ ಸಮಿತಿಯ ಅವಧಿ ಮಾರ್ಚ್‌ಗೆ ಮುಕ್ತಾಯಗೊಂಡಿದ್ದು ಅಕ್ಟೋಬರ್‌ಗೆ 1, ಜನವರಿಗೆ 1, ಏಪ್ರಿಲ್‌ಗೆ 3 ಮತ್ತು ನವೆಬರ್‌ನಲ್ಲಿ 1 ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅವಧಿಯು ಕೊನೆಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.