ADVERTISEMENT

ಕುಂದಾಪುರ | ಜಿಂಕೆ ಮಾಂಸ ಸಾಗಣೆ: ಬಂಧನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 13:20 IST
Last Updated 31 ಅಕ್ಟೋಬರ್ 2024, 13:20 IST
ಕುಂದಾಪುರ ತಾಲ್ಲೂಕಿನ ಕೊಡ್ಲಾಡಿ ಬಳಿಯಲ್ಲಿ ಅಕ್ರಮವಾಗಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿ ಬಂಧಿಸಿದ್ದಾರೆ
ಕುಂದಾಪುರ ತಾಲ್ಲೂಕಿನ ಕೊಡ್ಲಾಡಿ ಬಳಿಯಲ್ಲಿ ಅಕ್ರಮವಾಗಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿ ಬಂಧಿಸಿದ್ದಾರೆ   

ಕುಂದಾಪುರ: ಬೈಕ್‌ನಲ್ಲಿ ಅಕ್ರಮವಾಗಿ ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಅರಣ್ಯ ಇಲಾಖೆಯ ಸಿದ್ದಾಪುರ ವನ್ಯಜೀವಿ ವಲಯ ಸಿಬ್ಬಂದಿ, ಆತನಿಂದ ಜಿಂಕೆಯ ಮಾಂಸ ವಶಪಡಿಸಿಕೊಂಡಿದ್ದಾರೆ.

ಕೊಡ್ಲಾಡಿ ಗ್ರಾಮದ ಜಗದೀಶ್ ಮೇಸ್ತ (49) ಬಂಧಿತ ವ್ಯಕ್ತಿ. ರಾತ್ರಿ ಗಸ್ತು ನಡೆಸುತ್ತಿದ್ದ ವೇಳೆ ವನ್ಯಜೀವಿ ವಿಭಾಗದ ಸಿಬ್ಬಂದಿಗೆ, ಜಿಂಕೆ ಮಾಂಸ ಸಾಗಣೆ ಮಾಡುತ್ತಿದ್ದ ಸುಳಿವು ಸಿಕ್ಕಿದ್ದು, ದಾಳಿ ನಡೆಸಿದ ವೇಳೆ ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಬಂಧಿತ ಜಗದೀಶ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ.8ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯಿಂದ 23 ಕೆ.ಜಿ. ಜಿಂಕೆ ಮಾಂಸ, ಬೈಕ್, ಚೂರಿ, ಗನ್ ಪೌಡರ್ ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ನಿಂಗಪ್ಪ ವಾಲಿ, ಗುರುರಾಜ್ ಎಸ್ ನಾಯ್ಕ್, ವಿನಯ್, ಸುನಿಲ್, ಗಸ್ತು ಅರಣ್ಯ ಪಾಲಕರಾದ ಸುನಿಲ್, ರಂಜಿತ್, ಗಂಗಾಧರ್, ಕಳ್ಳ ಬೇಟೆ ತಡೆ ಶಿಬಿರದ ಅರಣ್ಯ ವೀಕ್ಷಕರಾದ ಪ್ರಶಾಂತ್, ಗಿರೀಶ್, ರವೀಶ್, ವಾಹನ ಚಾಲಕರಾದ ಉದಯ್, ಗಣೇಶ್ ಹಾಗೂ ಅಶೋಕ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.