ಉಡುಪಿ: ಶ್ರೀಕೃಷ್ಣಮಠದ ಆನೆ ಸುಭದ್ರೆಯನ್ನು ಸಂತಾನೋತ್ಪತ್ತಿಗಾಗಿ ಹೊನ್ನಳ್ಳಿಯ ಹಿರೇಕಲ್ಲು ಮಠದ ಅರಣ್ಯ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.
ಆನೆ ಸುಭದ್ರೆ 26 ವರ್ಷಗಳಿಂದ ಗರ್ಭ ಧರಿಸಲು ಸಾಧ್ಯವಾಗದ್ದರಿಂದ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೂಚನೆಯಂತೆ ಹಿರೇಕಲ್ಲು ಮಠದ ಅರಣ್ಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ವಾತಾವರಣ ಗರ್ಭ ಧರಿಸಲು ಅನುಕೂಲಕರವಾಗಿದೆ ಎಂದು ಅಧಿಕಾರಿಗಳು ಸಲಹೆ ನೀಡಿದ ಹಿನ್ನೆಲೆಯಲ್ಲಿ ಆನೆಯನ್ನು ಕಳುಹಿಸಲಾಗಿದೆ ಎಂದು ಮಠದ ಆಡಳಿತಾಧಿಕಾರಿ ಪಿ.ಆರ್.ಪ್ರಹ್ಲಾದ್ ತಿಳಿಸಿದರು.
ಸೋಮವಾರ ಬೆಳಿಗ್ಗೆ ಅರಣ್ಯಾಧಿಕಾರಿ ರೇವಣ್ಣ ಅವರ ನೇತೃತ್ವದಲ್ಲಿ ಆನೆಯನ್ನು ಲಾರಿಯ ಮೂಲಕ ಕಳುಹಿಸಲಾಯಿತು. ಸಂತಾನೋತ್ಪತ್ತಿ ಬಳಿಕ ಸುಭದ್ರೆ ಮತ್ತೆ ಕೃಷ್ಣಮಠಕ್ಕೆ ಬರಲಿದ್ದಾಳೆ ಎಂದುಪಿ.ಆರ್.ಪ್ರಹ್ಲಾದ್ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.