ಕುಂದಾಪುರ: ‘ಕಳೆದ ವಾರ ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಮತ್ತು ಅಲೈಡ್ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿರುವ ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿ ಕೆಲ ಜಿಹಾದಿ ಶಕ್ತಿಗಳ ಕುಮ್ಮಕ್ಕು ಪಡೆದು ವಿದ್ಯಾರ್ಥಿನಿಯರಾದ ಅಲಿಮತುಲ್ ಶೈಫಾ, ಶಬರಾಜ್ ಹಾಗೂ ಅಲಿಯಾ ಗುಪ್ತ ಮೊಬೈಲ್ ಕ್ಯಾಮೆರಾ ಬಳಸಿ ಅವರ ಖಾಸಗಿ ವಿಡಿಯೊ ಸೆರೆಹಿಡಿದ ಆಘಾತಕಾರಿ ಘಟನೆಯ ಸಂಪೂರ್ಣ ವಿವರ ತಿಳಿದುಕೊಳ್ಳಲು ಸರ್ಕಾರ ವಿಸ್ತ್ರತ ತನಿಖೆ ನಡೆಸಬೇಕು’ ಎಂದು ಜಿಲ್ಲಾ ಹಿಂದು ಜಾಗರಣ ವೇದಿಕೆ ಸಂಚಾಲಕ ಶಂಕರ ಕೋಟ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
‘ಒಂದು ವರುಷದ ಹಿಂದೆಯೂ ಕೂಡ ಈ ಮೂವರು, ಇದೇ ರೀತಿಯಲ್ಲಿ ಹಿಂದೂ ಹುಡುಗಿಯರನ್ನು ಗುರಿಯಾಗಿಸಿಕೊಂಡು ವಿಡಿಯೋ ಸೆರೆ ಹಿಡಿಯುತ್ತಿದ್ದ ಘಟನೆಯೂ ಗಮನದಲ್ಲಿದ್ದು, ಇದರ ಹಿಂದೆ ಜಿಹಾದಿ ಷಡ್ಯಂತ್ರಗಳು ಇರುವ ಗುಮಾನಿ ಇದೆ. ಜಿಲ್ಲಾ ಪೋಲಿಸ್ ಇಲಾಖೆ ಈ ಮೂವರ ಮೇಲೆ ಈಗಾಗಲೇ ಸ್ವಯಂಪ್ರೇರಿತ ಪ್ರಕರಣ(ಸುಮೊಟೊ) ದಾಖಲಿಸಿಕೊಂಡಿದ್ದರೂ ಇದರ ಹಿಂದಿರುವ ಜಿಹಾದಿ ಶಕ್ತಿಗಳ ಹುನ್ನಾರ ಏನೆಂಬುದು ಬಯಲಾಗಬೇಕಿದೆ. ಹಾಗಾಗಿ ಈ ದುಷ್ಕೃತ್ಯದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.
ನ್ಯಾಯ ದೊರಕದೆ ಇದ್ದಲ್ಲಿ ಜಿಲ್ಲೆಯ ವಿದ್ಯಾರ್ಥಿ ಸಮೂಹ ಹಾಗೂ ಹಿಂದೂ ಸಮಾಜವನ್ನು ಸಂಘಟಿಸಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.