ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠದಲ್ಲಿ ವಿಜಯದಾಸರ ಆರಾಧನೆ ಪ್ರಯುಕ್ತ ಸುಗುಣಶ್ರೀ ಭಜನಾ ಮಂಡಳಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಉಡುಪಿ ಆಶ್ರಯದಲ್ಲಿ ಭಾನುವಾರ ಸಹಸ್ರ ಕಂಠ ಗಾಯನ ಕಾರ್ಯಕ್ರಮ ಜರುಗಿತು.
ಮಹಿಳೆಯರು, ಪುರುಷರು, ಬಾಲಕ, ಬಾಲಕಿಯರು ರಾಜಾಂಗಣದಲ್ಲಿ ಏಕಕಂಠದಿಂದ ಕೃಷ್ಣ ಸಂಕೀರ್ತನೆ ಹಾಡಿದರು. ಕುಣಿತ ಭಜನೆಯೂ ನಡೆಯಿತು.
ವಿದುಷಿ ಉಷಾ ಹೆಬ್ಬಾರ್ ಮಾರ್ಗದರ್ಶನದಲ್ಲಿ ಗಾಯನ ಹಾಗೂ ರೋಹಿತ್ ಕಬ್ಯಾಡಿ ಕುಣಿತ ಭಜನೆಯ ತರಬೇತುದಾರರಾಗಿದ್ದರು.
ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಪ್ರಸನ್ನಾಚಾರ್ಯ, ಸಾಂಸ್ಖೃತಿಕ ಕಾರ್ಯದರ್ಶಿ ರಮೇಶ ಭಟ್ ಮತ್ತು ರವೀಂದ್ರ ಆಚಾರ್ಯ ಸಹಕರಿಸಿದರು.
ಈ ವೇಳೆ ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು, ಭಜನೆ ಕೀರ್ತನೆ ಹಾಗೂ ನರ್ತನ ಸಂದರ್ಭದಲ್ಲಿ ನಮ್ಮಲ್ಲಿರುವ ಅಹಂ ಕಣ್ಮರೆಯಾಗಿ ಭಗವಂತನಲ್ಲಿ ಭಕ್ತಿ ಜಾಗೃತವಾಗುತ್ತದೆ ಎಂದರು.
ಪರ್ಯಾಯ ಕಿರಿಯ ಯತಿ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ. ಬಿ. ಗೋಪಾಲಾಚಾರ್ಯ ನಿರೂಪಿಸಿದರು.
ಈ ಸಂದರ್ಭದಲ್ಲಿ ಭಜನಾ ತರಬೇತುದಾರರಾದ ಉಷಾ ಹೆಬ್ಬಾರ್ ಅವರಿಗೆ ‘ಹರಿದಾಸಾನುಗ್ರಹ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕುಣಿತ ಭಜನೆ ತರಬೇತುದಾರ ರೋಹಿತ್ ಕಬ್ಯಾಡಿ ಅವರನ್ನು ಗೌರವಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್‍ನ ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಘಟಕ ಅಧ್ಯಕ್ಷ ರಾಘವೇಂದ್ರ ಪಿ., ಪ್ರಮುಖರಾದ ವಜ್ರಾಕ್ಷಿ ಪಿ. ರಾವ್, ಸುಮಿತ್ರಾ ನಾಯಕ್, ಪೂರ್ಣಿಮಾ ಪೆರ್ಡೂರು, ಸತೀಶ ಕಉಮಾರ್ ಕೇದಾರ, ಪ್ರತಿಮಾ ಎಂ., ಯಶೋದಾ ಹೇರೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.