ಉಡುಪಿ: ಶೀರೂರು ಮಠದ ದಿ.ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಎಂಬ ಆರೋಪ ಸರಿಯಲ್ಲ. ಶ್ರೀಗಳ ವಿರುದ್ಧದ ಆರೋಪದಿಂದ ಮಠದ ಭಕ್ತರಿಗೆ ಹಾಗೂ ಅನುಯಾಯಿಗಳಿಗೆ ನೋವುಂಟಾಗಿದೆ ಎಂದು ಶೀರೂರು ಮಠ ಭಕ್ತ ಸಮಿತಿ ತಿಳಿಸಿದೆ.
ಈಚೆಗೆ ಶೀರೂರು ಮಠದಲ್ಲಿ ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಲಕ್ಷ್ಮೀವರ ತೀರ್ಥರು ಕೋಟ್ಯಂತರ ರೂಪಾಯಿ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಬಗ್ಗೆ ಪ್ರಸ್ತಾಪಿಸಲಾಗಿದೆ. ಮಠದ 2017 ಹಾಗೂ 18ರ ಆಡಳಿತದ ಅವಧಿಯಲ್ಲಿನ ತೆರಿಗೆ ಪಾವತಿಯ ವಿವರಗಳು ಲಭ್ಯವಿದೆ.
ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿಮಾಡಿದ ಕೂಡಲೇ ಮಠದ ಆದಾಯ ವಿವರವನ್ನು ಮಾಧ್ಯಮಗಳಲ್ಲಿ ಬಹಿರಂಗಪಡಿಸುವುದು ದುರುದ್ದೇಶಪೂರಿತ ಹಾಗೂ ಕಾನೂನಿಗೆ ವಿರುದ್ಧ. ಇದರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಶೀರೂರು ಮಠದ ಭಕ್ತ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.