ಉಡುಪಿ: ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ, ತರಕಾರಿ ಬೆಲೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಹೊರೆ ಬೀಳುತ್ತಿದೆ.
ಕಳೆದ ವಾರ ಕೆ.ಜಿ.ಗೆ ₹36 ಇದ್ದ ಟೊಮೆಟೊ ದರ ₹60ಕ್ಕೆ ಏರಿಕೆಯಾಗಿದೆ. ಕೆ.ಜಿ.ಗೆ ₹32 ಇದ್ದ ಈರುಳ್ಳಿ ದರ ₹40ಕ್ಕೆ ಜಿಗಿದಿದೆ.
ಈರುಳ್ಳಿ ಮತ್ತು ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಲಭ್ಯತೆ ಕೊರತೆ ಉಂಟಾಗಿ ಬೆಲೆ ಏರಿಕೆಯಾಗಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.
ಕಳೆದ ವಾರ ಕೆ.ಜಿ.ಗೆ ₹30 ಇದ್ದ ಮಂಗಳೂರು ಸೌತೆಯ ದರ ₹80ಕ್ಕೆ ನೆಗೆದಿದೆ. ಕ್ಯಾರೆಟ್ ಕೆ.ಜಿ.ಗೆ ₹60ರಿಂದ ₹80ಕ್ಕೆ ಜಿಗಿದಿದೆ. ಬೀನ್ಸ್, ಸುವರ್ಣ ಗಡ್ಡೆ, ಹಸಿ ಮೆಣಸಿನ ಕಾಯಿ ದರ ಇಳಿಕೆಯಾಗಿರುವುದು ಜನರಲ್ಲಿ ಅಲ್ಪ ಸಮಾಧಾನ ಉಂಟು ಮಾಡಿದೆ.
ಕಳೆದ ವಾರ ಕೆ.ಜಿ.ಗೆ ₹160 ಇದ್ದ ಬೀನ್ಸ್ ದರ 120ಕ್ಕೆ ಇಳಿಕೆಯಾಗಿದೆ. ಕೆ.ಜಿ.ಗೆ ₹160 ಇದ್ದ ಹಸಿ ಮೆಣಸಿನಕಾಯಿಯ ಬೆಲೆ ₹120ಕ್ಕೆ ಕುಸಿದಿದೆ. ಶುಂಠಿ, ಬೂದುಗುಂಬಳ, ಬೆಂಡೆಕಾಯಿ, ಬದನೆಕಾಯಿ, ಬೆಳ್ಳುಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮಲ್ಲಿಗೆ ದರದಲ್ಲಿ ಏರಿಕೆ:
ಬುಧವಾರ ಅಟ್ಟಿಗೆ ₹220 ಇದ್ದ ಶಂಕರಪುರ ಮಲ್ಲಿಗೆ ದರವು ಗುರುವಾರ ₹300ಕ್ಕೆ ಏರಿಕೆಯಾಗಿದೆ. ಉಳಿದ ಹೂವುಗಳ ಬೆಲೆಯಲ್ಲಿ ಏರಿಕೆಯಾಗಿಲ್ಲ. ಹಣ್ಣಿನ ದರದಲ್ಲೂ ಕಳೆದ ವಾರಕ್ಕೆ ಹೋಲಿಸಿದರೆ ಯಾವುದೇ ವ್ಯತ್ಯಾಸವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.