ADVERTISEMENT

ವಿಕ್ರಂ ಗೌಡ ಎನ್‌ಕೌಂಟರ್‌: ಕೂಡ್ಲು ಫಾಲ್ಸ್‌ ಬಂದ್‌

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 13:26 IST
Last Updated 21 ನವೆಂಬರ್ 2024, 13:26 IST
<div class="paragraphs"><p>ಕೂಡ್ಲು ಫಾಲ್ಸ್‌</p></div>

ಕೂಡ್ಲು ಫಾಲ್ಸ್‌

   

ಹೆಬ್ರಿ (ಉಡುಪಿ ಜಿಲ್ಲೆ): ಹೆಬ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್‌ ಎನ್‌ಕೌಂಟರ್‌ ನಡೆದ ಕಾರಣ ಮುಂಜಾಗ್ರತಾ ಕ್ರಮವಾಗಿ ಕೂಡ್ಲು ಜಲಪಾತಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಕೂಡ್ಲು ಫಾಲ್ಸ್‌ ಇರುವ ಪ್ರದೇಶದಲ್ಲೇ ನಕ್ಸಲ್‌ ಚಟುವಟಿಕೆ ಮತ್ತೆ ಬಿರುಸುಗೊಂಡಿರುವುದು ಹಾಗೂ ನಕ್ಸಲ್‌ ನಿಗ್ರಹ ಪಡೆಯವರಿಂದ ಹತನಾದ ನಕ್ಸಲ್‌ ನಾಯಕ ವಿಕ್ರಂ ಗೌಡನ ಮನೆ ಜಲಪಾತದ ಸಮೀಪದಲ್ಲೇ ಇರುವುದರಿಂದ ಒಂದು ವಾರ ಜಲಪಾತಕ್ಕೆ ಪ್ರವೇಶ ಇಲ್ಲ ಎಂದು ಸೋಮೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್‌ ಶಿವರಾಂ ಬಾಬು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.