ಕಾರ್ಕಳ: ತಾಲ್ಲೂಕಿನ ನೆಲ್ಲಿಕಾರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಸಂಘದ ಸಭಾಭವನದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ ನಡೆಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಎಂಜಿನಿಯರ್ ವಿಭಾಗದ ಪ್ರತಿನಿಧಿ ನಿಟ್ಟೆ ಹರ್ಷವರ್ಧನ ಆಚಾರ್ಯ ಮಾತನಾಡಿ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ವಿಶ್ವಕರ್ಮ ಸಮಾಜದ ಸಂಘಟನೆಗಳ ನಾಯಕರು ನಾಯಕತ್ವದ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.
ಮೂಡುಬಿದಿರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎನ್, ಮರೋಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಶೋಧರ ಮಾತನಾಡಿದರು. ಸಂತೋಷ್ ಪುರೋಹಿತ್ ಹೊಸ್ಮಾರ್ ಧಾರ್ಮಿಕ ವಿಧಿಗಳನ್ನು ನಡೆಸಿದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಹರೀಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮತನಾಡಿದರು. ಪ್ರಸಾದ್ ಸಿ ಆಚಾರ್ಯ, ಸಂತೋಷ್ ಪುರೋಹಿತ್ ಹೊಸ್ಮಾರ್, ನೆಲ್ಲಿಕಾರು ಕೂಡುವಳಿಕೆ ಮೊಕ್ತೇಸರ ಕರುಣಾಕರ ಆಚಾರ್ಯ ಮತ್ತು ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಇದ್ದರು. ಸಾಧಕರಾದ ರಶ್ಮಿ, ಪಲ್ಲವಿ ಹಾಗೂ ಸನ್ನಿಧಿ ಅವರನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯ ಅನ್ವಿತ್,ಮಹಿಳಾ ಮಂಡಳಿ ಸದಸ್ಯೆ ಸೌಮ್ಯಾ ಆಚಾರ್ಯ, ಸಂತೋಷ್ ಪೇರಲ್ಕೆ, ನವೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.