ADVERTISEMENT

ಯಡ್ತಾಡಿ: ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 6:40 IST
Last Updated 30 ಜೂನ್ 2024, 6:40 IST
ಯಡ್ತಾಡಿಯ ಪ್ರಗತಿಪರ ಕೃಷಿಕ ಸತೀಶ ಕುಮಾರ್ ಶೆಟ್ಟಿ ಅವರ ಜಮೀನಿನಲ್ಲಿ ಶನಿವಾರ ೧೬ನೇ ವರ್ಷದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು..
ಯಡ್ತಾಡಿಯ ಪ್ರಗತಿಪರ ಕೃಷಿಕ ಸತೀಶ ಕುಮಾರ್ ಶೆಟ್ಟಿ ಅವರ ಜಮೀನಿನಲ್ಲಿ ಶನಿವಾರ ೧೬ನೇ ವರ್ಷದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು..   

ಯಡ್ತಾಡಿ (ಬ್ರಹ್ಮಾವರ): ಮಂಗಳೂರಿನ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಕೃಷಿ ವಿಜ್ಞಾನ ಸಹಕಾರದಲ್ಲಿ ಯಡ್ತಾಡಿಯ ಪ್ರಗತಿಪರ ಕೃಷಿಕ ಸತೀಶ ಕುಮಾರ್ ಶೆಟ್ಟಿ ಅವರ ಜಮೀನಿನಲ್ಲಿ ಶನಿವಾರ 16ನೇ ವರ್ಷದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಕೃಷಿ ಮಾರ್ಗದರ್ಶಕ ಬಾರ್ಕೂರು ವೈ.ಜಿ.ಕಾಮತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಾರೈಸಿದರು. ಬ್ರಹ್ಮಾವರ ವಲಯ ಕೃಷಿ ಸಂಶೋಧನ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತಿ ಹೊಂದಿದ ಸಹಾಯಕ ಕೃಷಿ ನಿರ್ದೇಶಕ ಮೋಹನ್‌ ರಾಜ್, ಯಾಂತ್ರೀಕೃತ ಕೃಷಿಗೆ ಸಹಕಾರ ನೀಡಿದ ಶಂಕರ್ ಅವರನ್ನು ಸನ್ಮಾನಿಸಲಾಯಿತು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಧನಂಜಯ, ವಿಜ್ಞಾನಿಗಳಾದ ಡಾ.ಸುಧೀರ್‌ ಕಾಮತ್, ಡಾ.ರೇವಣ್ಣ, ವಿ.ಆರ್. ವಿನೋದ್, ವಿಆರ್‌ಡಿಎಫ್ ಸಿಇಒ ಸಚಿನ್ ಹೆಗ್ಡೆ, ನಿವೃತ್ತ ಪ್ರಾಂಶುಪಾಲ ಬಾರ್ಕೂರು ಸೀತಾರಾಮ ಶೆಟ್ಟಿ, ಶಿರಿಯಾರ ವ್ಯಾವಸಾಯಿಕ ಸಂಘದ ಪ್ರದೀಪ ಬಲ್ಲಾಳ, ಹವರಾಲು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಉದಯಚಂದ್ರ ಶೆಟ್ಟಿ, ಬ್ಯಾಂಕ್ ಆಫ್ ಬರೋಡ ಪ್ರಬಂಧಕ ನವೀನ, ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಬಂಧಕ ಪ್ರವೀಣ ಶೆಟ್ಟಿ ಇದ್ದರು.

ADVERTISEMENT

ಸಂಚಾಲಕ ಯಡ್ತಾಡಿ ಸತೀಶ ಕುಮಾರ ಶೆಟ್ಟಿ ಸ್ವಾಗತಿಸಿದರು. ಜಂಬೂರು ಕೃಷ್ಣ ಅಡಿಗ ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಜಯ ಕುಮಾರ್ ಶೆಟ್ಟಿ ನಿರೂಪಿಸಿದರು. ವಿಮಲಾ ಎಸ್.ಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.