ADVERTISEMENT

‘ಉತ್ತರ, ದಕ್ಷಿಣವನ್ನು ಬೆಸೆಯುವ ಕಲೆ ಯಕ್ಷಗಾನ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 5:45 IST
Last Updated 26 ಜೂನ್ 2024, 5:45 IST
ವಾರಾಣಸಿ ಎನ್‌ಎಸ್‌ಡಿಯ ವಿದ್ಯಾರ್ಥಿಗಳು ನಗರದ ಪೂರ್ಣಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಿಂದಿಯಲ್ಲಿ ‌‘ಏಕಲವ್ಯ’ ಯಕ್ಷಗಾನ ಪ್ರದರ್ಶನ ನೀಡಿದರು
ವಾರಾಣಸಿ ಎನ್‌ಎಸ್‌ಡಿಯ ವಿದ್ಯಾರ್ಥಿಗಳು ನಗರದ ಪೂರ್ಣಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಿಂದಿಯಲ್ಲಿ ‌‘ಏಕಲವ್ಯ’ ಯಕ್ಷಗಾನ ಪ್ರದರ್ಶನ ನೀಡಿದರು   

ಉಡುಪಿ: ಉತ್ತರ ಮತ್ತು ದಕ್ಷಿಣ ಭಾರತವನ್ನು ಬೆಸೆಯುವ ಶಕ್ತಿ ಯಕ್ಷಗಾನಕ್ಕಿದೆ ಎಂದು ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಪೂರ್ಣಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರಾಣಸಿ ಎನ್‌ಎಸ್‌ಡಿಯ ವಿದ್ಯಾರ್ಥಿಗಳ ‌‘ಏಕಲವ್ಯ’ ಯಕ್ಷಗಾನ ಪ್ರದರ್ಶನಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾವ ಶುದ್ಧಿ, ಭಾಷಾ ಶುದ್ಧಿ ಮತ್ತು ಕ್ರಿಯಾ ಶುದ್ಧಿಯ ದ್ಯೋತಕವಾಗಿ ಯಕ್ಷಗಾನ ಕಲೆ ನೆಲೆ ನಿಂತಿದೆ ಎಂದರು.

ADVERTISEMENT

ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುವ ಮೂಲಕ ಗುರು ಬನ್ನಂಜೆ ಸಂಜೀವ ಸುವರ್ಣ ಅವರು  ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದರು.

ಶಾಸಕ ಯಶ್‌ಪಾಲ್‌ ಸುವರ್ಣ ಪಾಲ್ಗೊಂಡಿದ್ದರು. ಬಳಿಕ ಎನ್‌ಎಸ್‌ಡಿಯ 20 ಮಂದಿ ವಿದ್ಯಾರ್ಥಿಗಳ ತಂಡವು ‘ಏಕಲವ್ಯ’ ಹಿಂದಿ ಯಕ್ಷಗಾನ ಪ್ರದರ್ಶನ ನೀಡಿತು.

ವಾರಾಣಸಿ ಎನ್‌ಎಸ್‌ಡಿಯ ವಿದ್ಯಾರ್ಥಿಗಳು ನಗರದ ಪೂರ್ಣಪ್ರಜ್ಞಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಿಂದಿಯಲ್ಲಿ ‌‘ಏಕಲವ್ಯ’ ಯಕ್ಷಗಾನ ಪ್ರದರ್ಶನ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.