ADVERTISEMENT

ಕಾರ್ಕಳದ ವಿವಿಧೆಡೆ ವಿಶ್ವ ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 13:42 IST
Last Updated 22 ಜೂನ್ 2024, 13:42 IST
ಕಾರ್ಕಳ ತಾಲ್ಲೂಕಿನ ಬಜಗೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಲ್ಲಿ ಶುಕ್ರವಾರ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಕಳ ತಾಲ್ಲೂಕಿನ ಬಜಗೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಲ್ಲಿ ಶುಕ್ರವಾರ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.   

ಕಾರ್ಕಳ: ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಯೋಗ ದಿನ ಆಚರಿಸಲಾಯಿತು.

ಬಜಗೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಎನ್‌ಎಸ್‌ಎಸ್‌ ಘಟಕ ಸಂಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ನಡೆಯಿತು.

ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲ ಸಿದ್ಧಾಪುರ ವಾಸುದೇವ ಭಟ್ ಮಾತನಾಡಿ, ದೇಹ, ಮನಸ್ಸಿನ ಉತ್ತಮ ಆರೋಗ್ಯ, ಕ್ರಿಯಾತ್ಮಕ ಚಟುವಟಿಕೆಗಳಿಗೆ ಯೋಗ ಅವಶ್ಯಕ ಎಂದರು.

ADVERTISEMENT

ಯೋಗ ಶಿಕ್ಷಕ ಕೆ. ಸತ್ಯೇಂದ್ರ ಪೈ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಗಾಯತ್ರಿ ಪ್ರಭು ಇದ್ದರು. ಪ್ರಾಂಶುಪಾಲ ಕೆ.ಪಿ. ಲಕ್ಷ್ಮೀನಾರಾಯಣ ಸ್ವಾಗತಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ವಂದಿಸಿದರು. ಕನ್ನಡ ಉಪನ್ಯಾಸಕ ವಿಕ್ರಂ ನಿರೂಪಿಸಿದರು.

ಆನೆಕೆರೆ ಬಸದಿ: ಬಿಜೆಪಿ ಮಂಡಲದ ವತಿಯಿಂದ ನಗರದ ಆನೆಕೆರೆ ಬಸದಿಯಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಬಿಜೆಪಿ ಕಾರ್ಕಳ ಮಂಡಲಾಧ್ಯಕ್ಷ ನವೀನ್ ನಾಯ್ಕ್ ಚಾಲನೆ ನೀಡಿದರು.

ಯೋಗ ಶಿಕ್ಷಕ ಅಶೋಕ್ ಯೋಗಾಭ್ಯಾಸ ತರಗತಿ ನಡೆಸಿಕೊಟ್ಟರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಉದಯ್ ಎಸ್.ಕೋಟ್ಯಾನ್, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಬೋಳ, ಮಂಡಲ ವಕ್ತಾರ ರವೀಂದ್ರ ಮೊಯಿಲಿ, ಮಂಡಲ ಯೋಗ ದಿನ ಸಂಚಾಲಕ ಪ್ರವೀಣ್ ಸಾಲ್ಯಾನ್, ಒಬಿಸಿ ಮೋರ್ಚಾ ಅಧ್ಯಕ್ಷ ಪ್ರಸಾದ್ ಐಸಿರ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಬಲಿಪ, ಬಿಜೆಪಿ ಕಾರ್ಕಳ ನಗರಾಧ್ಯಕ್ಷ ನಿರಂಜನ್ ಜೈನ್, ಬಜೆಗೋಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಹಿರ್ಗಾನ, ಪ್ರಮುಖರಾದ ರವೀಂದ್ರ ಮಡಿವಾಳ, ಅನಂತ ಕೃಷ್ಣ ಶೆಣೈ, ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ಇದ್ದರು.

ಸಚ್ಚರಿಪೇಟೆ ಲಯನ್ಸ್ ಶಾಲೆ:

ಬೆಳ್ಮಣ್ ಜೇಸಿಐ, ಸಚ್ಚರಿಪೇಟೆ ಲಯನ್ಸ್ ಆಂಗ್ಲಮಾಧ್ಯಮ ಶಾಲೆ, ಲಯನ್ಸ್ ಕ್ಲಬ್ ಮುಂಡ್ಕೂರು ಕಡಂದಲೆ ಸಂಯುಕ್ತ ಆಶ್ರಯದಲ್ಲಿ ಸಚ್ಚರಿಪೇಟೆ ಲಯನ್ಸ್ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು.

ಉಡುಪಿ ಜಿಲ್ಲಾ ಪಂತಂಜಲಿ ಯೋಗ ಸಮಿತಿ ಕಾರ್ಯದರ್ಶಿ ರಂಜಿತ್ ಕೆ. ಉದ್ಘಾಟಿಸಿ ಮಾತನಾಡಿ, ಯೋಗ ಆರೋಗ್ಯಪೂರ್ಣ ಜೀವನಕ್ಕೆ, ಮಾನಸಿಕ, ದೈಹಿಕ ದೃಢತೆ ಹೊಂದಲು ಸಹಕಾರಿ ಎಂದರು.

ಜ್ಞಾನಸುಧಾ: ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನ ನಡೆಯಿತು. ಉದ್ಘಾಟಿಸಿದ ಅಂತರರಾಷ್ಟ್ರೀಯ ಯೋಗಪಟು ನಿಧಿ ಯು.ಆಚಾರ್ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಪ್ರಾಂಶುಪಾಲ ದಿನೇಶ್ ಎಂ.ಕೊಡವೂರು, ಪಿಆರ್‌ಒ ಜ್ಯೋತಿ, ಡೀನ್ ಅಕಾಡೆಮಿಕ್ಸ್ ಮಿಥುನ್ ಯು, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶಕುಂತಲಾ ಎಂ.ಸುವರ್ಣ, ಉಪಪ್ರಾಂಶುಪಾಲೆ ಸಾಹಿತ್ಯ ಉಷಾ ರಾವ್.ಯು, ಪ್ರೌಢಶಾಲಾ ಉಪಪ್ರಾಂಶುಪಾಲೆ ವಾಣಿ ಜಯಶೀಲ್, ಪ್ರೌಢಶಾಲಾ ಅಕಾಡೆಮಿಕ್ ಅಡ್ವೈಸರ್ ಶಾರದಾ ಅಂಬರೀಶ್, ದೈಹಿಕ ಶಿಕ್ಷಣ ಶಿಕ್ಷಕಿ ರೇಷ್ಮಾ ಸಾಲಿಸ್, ಕಿರಣ್ ಕುಮಾರ್ ಇದ್ದರು. ಆಂಗ್ಲಭಾಷಾ ಶಿಕ್ಷಕಿ ದಿವ್ಯಾ ರಾವ್ ಯು. ನಿರೂಪಿಸಿದರು.

ನ್ಯಾಯಾಲಯ: ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಆಶ್ರಯದಲ್ಲಿ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಅಶೋಕ್ ಜಿ. ಯೋಗ ದಿನ, ಯೋಗಾಸನದ ಮಹತ್ವ ತಿಳಿಸಿದರು.

ಹಿರಿಯ ಸಿವಿಲ್ ಮತ್ತು ಎ.ಸಿ.ಜೆ.ಯಂ. ನ್ಯಾಯಾಧೀಶೆ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ಶರ್ಮಿಳಾ ಸಿ. ಎಸ್, ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಕೋಮಲಾ ಆ‌ರ್.ಸಿ., ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶ ಅಬುತಾಹೀರ್‌, ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಕೆ. ಹರೀಶ್ ಅಧಿಕಾರಿ, ಕೋಶಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ವಕೀಲರು, ಸಿಬ್ಬಂದಿ ಯೋಗಾಸನ ಮಾಡಿದರು.

ಕಾರ್ಕಳ ತಾಲ್ಲೂಕಿನ ಸಚ್ಚೇರಿಪೇಟೆ ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ವಿಶ್ವ ಯೋಗ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಯೋಗಾಸನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.