ADVERTISEMENT

‘ವಿಮರ್ಶೆ ಎನ್ನುವುದು ಸಂಸ್ಕೃತಿ ಕಟ್ಟುವ ಕೆಲಸ’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 8:52 IST
Last Updated 4 ಏಪ್ರಿಲ್ 2014, 8:52 IST

ಅಂಕೋಲಾ: ‘ಕೆಲವು ಸಾಹಿತಿಗಳು ಕೂಡ ರಾಜಕಾರಣಿಗಳಂತೆ ಹೊಗಳಿಕೆ ಯನ್ನು ಬಯಸುತ್ತಾರೆ. ಹೀಗಾಗಿ ಅಂತವರು ಕೃತಿ ವಿಮರ್ಶೆಗೆ ಭಯಪಡು ತ್ತಾರೆ. ವಿಮರ್ಶೆ ಎನ್ನು ವುದು ಸಂಸ್ಕೃತಿಯನ್ನು ಕಟ್ಟುವ ಕೆಲಸವಾಗಿದೆ’ ಎಂದು ವಿಮರ್ಶಕ ಪ್ರೊ.ಜಿ.ಎಚ್. ನಾಯಕ ಹೇಳಿದರು.

ಪಟ್ಟಣದ ಅಂಬಾರಕೊಡ್ಲದ ಶ್ರೀರಾಘವೇಂದ್ರ ಪ್ರಕಾಶನದವರು ಮಂಗಳವಾರ ಆಯೋಜಿಸಿದ್ದ ‘ಪಟ್ಟಾಂಗ’ದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿ ಈ ಕುರಿತು ಅವರು ಮಾತನಾಡಿದರು.

‘ಕೃತಿಗಳ ಸಂಖ್ಯೆಗೆ ಅನುಗುಣವಾಗಿ ಲೇಖಕ ಶ್ರೇಷ್ಠ ಎನಿಸಿಕೊಳ್ಳುವುದಿಲ್ಲ. ಬದಲಿಗೆ ಆತನ ಬರವಣಿಗೆಯಲ್ಲಿ ಶ್ರೇಷ್ಠತೆ ಅಡಗಿದೆ’ ಎಂದರು.

ಪ್ರಮುಖರಾದ ಪ್ರೊ.ಮೋಹನ ಹಬ್ಬು, ಡಾ.ಆರ್.ಜಿ. ಗುಂದಿ, ಶಾಂತಾರಾಮ ನಾಯಕ ಹಿಚ್ಕಡ, ಕೆ.ಎನ್. ನಾಯಕ, ಶ್ರೀದೇವಿ ಕೆರೆಮನೆ, ರೇಣುಕಾ ರಮಾನಂದ, ನಾಗಪತಿ ಹೆಗಡೆ, ಎನ್.ವಿ. ನಾಯಕ, ನಾಗೇಂದ್ರ ನಾಯಕ ತೊರ್ಕೆ ಇತರರು ಪ್ರಶ್ನೆ ಕೇಳಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಕಾರ್ಯದರ್ಶಿ ಜೆ. ಪ್ರೇಮಾನಂದ, ಉಲ್ಲಾಸ ಹುದ್ದಾರ ಮತ್ತಿತರರು ಉಪಸ್ಥಿತರಿದ್ದರು.

ಸಾಹಿತಿ ವಿ.ಜೆ. ನಾಯಕ ಮಾತನಾಡಿದರು. ರಾಘವೇಂದ್ರ ಪ್ರಕಾಶನದ ಸಂಚಾಲಕ ಹಾಗೂ ಸಾಹಿತಿ ವಿಷ್ಣು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂಕೋಲಾ ಕಸಾಪ ತಾಲ್ಲೂಕು ಘಟಕದ ವತಿಯಿಂದ ಪ್ರೊ.ಜಿ.ಎಚ್. ನಾಯಕ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.