ಜೊಯಿಡಾ: ತಾಲ್ಲೂಕಿನ ಫಣಸೋಲಿಯಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದ ನಡೆಯುತ್ತಿರುವ 70ನೇ ವನ್ಯಜೀವಿ ಸಪ್ತಾಹಕ್ಕೆ ಉಪಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂಧೆ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವರ್ಷವೂ ನಮ್ಮ ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗುತ್ತದೆ. ಇದರ ಉದ್ದೇಶ ಅರಣ್ಯ ಮತ್ತು ವನ್ಯ ಪ್ರಾಣಿಗಳ ರಕ್ಷಣೆ ಬಗ್ಗೆ ತಿಳಿಸುವುದಾಗಿದೆ. ಅರಣ್ಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ, ಕಾಡು ಇದ್ದರೆ ಮನುಕುಲ ಉಳಿಯಲು ಮುಂದಿನ ಯುವ ಪೀಳಿಗೆಗೆ ಕಾಡಿನ ಮಹತ್ವ ನಾವು ತಿಳಿಸಬೇಕಾಗಿದೆ ಎಂದರು.
ಫಣಸೋಲಿಯ ಶಿವಾಜಿ ವೃತ್ತದಲ್ಲಿ ವನ್ಯಜೀವಿ ಸಪ್ತಾಹದ ಬಗ್ಗೆ ಮೆರವಣಿಗೆ ನಡೆಯಿತು. ನಂತರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಎ.ಸಿ.ಎಫ್ ಗಳಾದ ಎಂ.ಎಸ್ ಕಳ್ಳಿಮಠ, ಗಿರೀಶ್ ಸಂಕ್ರಿ, ಆರ್.ಎಫ್ ಓಗಳಾದ ಮಹಂತೇಶ ಪಾಟೀಲ್, ರವಿಕಿರಣ್ ಸಂಪಗಾವಿ, ನೀಲಕಂಠ ದೇಸಾಯಿ, ಗಣರಾಜ್ ಪಟಗಾರ, ಹಾಗೂ ಸ್ಥಳೀಯರಾದ ನಂದು ತೇಲಿ, ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಬಾವುಜಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು ಶಾಲಾ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.