ADVERTISEMENT

ಕಾರವಾರದ ದೇವಬಾಗಕ್ಕೆ ನಟ ರಮೇಶ್ ಅರವಿಂದ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 16:19 IST
Last Updated 26 ಅಕ್ಟೋಬರ್ 2024, 16:19 IST
ಚಲನಚಿತ್ರ ನಟ ರಮೇಶ್ ಅರವಿಂದ ಅವರು ಕಾರವಾರದ ದೇವಬಾಗದಿಂದ ದೋಣಿ ಮೂಲಕ ಕೂರ್ಮಗಡ ದ್ವೀಪದತ್ತ ಪ್ರಯಾಣ ಬೆಳೆಸಿದರು
ಚಲನಚಿತ್ರ ನಟ ರಮೇಶ್ ಅರವಿಂದ ಅವರು ಕಾರವಾರದ ದೇವಬಾಗದಿಂದ ದೋಣಿ ಮೂಲಕ ಕೂರ್ಮಗಡ ದ್ವೀಪದತ್ತ ಪ್ರಯಾಣ ಬೆಳೆಸಿದರು   

ಕಾರವಾರ: ಪ್ರವಾಸದ ಅಂಗವಾಗಿ ಚಲನಚಿತ್ರ ನಟ ರಮೇಶ್ ಅರವಿಂದ ಶನಿವಾರ ಕಾರವಾರಕ್ಕೆ ಆಗಮಿಸಿದ್ದಾರೆ.

ತಾಲ್ಲೂಕಿನ ದೇವಬಾಗದಲ್ಲಿನ ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್‍ಗೆ ಭೇಟಿ ನೀಡಿದ ಅವರು ಊಟ ಸವಿದರು. ಬಳಿಕ ಕಡಲತೀರ, ಕಾಂಡ್ಲಾ ವನಗಳನ್ನು ವೀಕ್ಷಿಸಿದರು. ಮಧ್ಯಾಹ್ನದ ಬಳಿಕ ಕೂರ್ಮಗಡ ದ್ವೀಪದಲ್ಲಿರುವ ಖಾಸಗಿ ರೆಸಾರ್ಟ್‍ಗೆ ಅವರು ತೆರಳಿದರು ಎಂದು ಮೂಲಗಳು ತಿಳಿಸಿವೆ.

‘ಚಿತ್ರನಟ ರಮೇಶ್ ಅವರು ಖಾಸಗಿ ಭೇಟಿ ನಿಮಿತ್ತ ಕಾರವಾರಕ್ಕೆ ಬಂದಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಅವರು ಬಂದಿದ್ದು, ಇಲ್ಲಿನ ಕೆಲ ತಾಣಗಳನ್ನು ವೀಕ್ಷಿಸಿ ಮರಳಲಿದ್ದಾರೆ’ ಎಂದು ರಮೇಶ್ ಆಪ್ತ ವಲಯದವರೊಬ್ಬರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.