ADVERTISEMENT

ಮಾಜಾಳಿಯಲ್ಲಿ ಸಂಭ್ರಮದ ‘ಬಲೂನ್’ ಜಾತ್ರೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 13:12 IST
Last Updated 30 ನವೆಂಬರ್ 2023, 13:12 IST
ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ರಾಮನಾಥ ದೇವರ ಜಾತ್ರೆ ಅಂಗವಾಗಿ ದೊಡ್ಡ ಗಾತ್ರದ ಬಲೂನ್‍ನ್ನು ಹಾರಿ ಬಿಡಲಾಯಿತು.
ಚಿತ್ರ: ಕೆ.ಸುರೇಂದ್ರ
ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ರಾಮನಾಥ ದೇವರ ಜಾತ್ರೆ ಅಂಗವಾಗಿ ದೊಡ್ಡ ಗಾತ್ರದ ಬಲೂನ್‍ನ್ನು ಹಾರಿ ಬಿಡಲಾಯಿತು. ಚಿತ್ರ: ಕೆ.ಸುರೇಂದ್ರ   

ಕಾರವಾರ: ತಾಲ್ಲೂಕಿನ ಮಾಜಾಳಿಯ ಗ್ರಾಮ ದೇವರಾದ ರಾಮನಾಥ ದೇವರ ವಾರ್ಷಿಕ ಜಾತ್ರೆ ಮಹೋತ್ಸವ ಗುರುವಾರ ನಡೆಯಿತು. ಬಿಸಿ ಗಾಳಿಯಿಂದ ಮೇಲಕ್ಕೆ ನೆಗೆಯುವ ‘ಬಲೂನ್’(ವಾಫರ್) ಹಾರಿಬಿಡುವುದು ಜಾತ್ರೆಯ ವಿಶೇಷ.

ಆಶ್ವಿಜ ಮಾಸದ ಚತುರ್ಥಿ ದಿನದಂದು ಜಾತ್ರೆ ಆಚರಿಸಲಾಗುತ್ತದೆ. ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಳ್ಳುತ್ತಿದ್ದಂತೆ ಬಲೂನ್ ಹಾರಿಬಿಡಲಾಗುತ್ತದೆ. ಸಂಜೆ ಜಾತ್ರೆ ಸಮಾರೋಪಗೊಳ್ಳುತ್ತಿದ್ದಂತೆ ಇನ್ನೊಂದು ಬಲೂನ್ ಹಾರಿಸಲಾಗುತ್ತದೆ.

ಗುರುವಾರ ಜಾತ್ರೆ ಆರಂಭಗೊಳ್ಳುತ್ತಿದ್ದಂತೆ ನೂರಾರು ಭಕ್ತರು ಬಲೂನ್ ಹಾರಿಬಿಟ್ಟರು. ‘ಹರ ಹರ ಮಹದೇವ’ ಎಂಬ ಘೋಷಣೆ ಮೊಳಗಿಸಿದರು. ಸಂಜೆ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಳ್ಳತ್ತಿದ್ದಂತೆ ಇನ್ನೊಂದು ಬಲೂನ್ ಹಾರಿಬಿಡಲಾಯಿತು. ಎರಡೂ ಬಲೂನ್‍ಗಳು ಗಾಳಿಯ ರಭಸಕ್ಕೆ ವೇಗವಾಗಿ ಸಮುದ್ರದ ಕಡೆಗೆ ಹಾರಿದವು.

ADVERTISEMENT

‘ಗ್ರಾಮದಲ್ಲಿ ಉಂಟಾಗುವ ತೊಂದರೆಗಳ ನಿವಾರಣೆಗೆ ಬಲೂನ್ ಹಾರಿಸಲಾಗುತ್ತದೆ. ಕೆಲವು ತಾಸು ಗಾಳಿಯಲ್ಲಿ ಹಾರಾಡುವ ಬಲೂನ್ ನಂತರ ಸಮುದ್ರದಲ್ಲಿ ಬೀಳುತ್ತದೆ. ಬಲೂನ್ ಹಾರಿಬಿಟ್ಟ ಬಳಿಕ ಗ್ರಾಮಕ್ಕೆ ಎದುರಾದ ಕಷ್ಟ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಮಾಜಾಳಿ ಗ್ರಾಮಸ್ಥರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.