ADVERTISEMENT

ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ

ಮುರುಡೇಶ್ವರದ ಕಡಲಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ಭಾನುವಾರ ಕರಾವಳಿ ಕಾವಲು ಪಡೆಯ ಕೆ.ಎನ್.ಡಿ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 5:43 IST
Last Updated 13 ಅಕ್ಟೋಬರ್ 2024, 5:43 IST
<div class="paragraphs"><p>ಮುರುಡೇಶ್ವರದ ಕಡಲಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ಭಾನುವಾರ ಕರಾವಳಿ ಕಾವಲು ಪಡೆಯ ಕೆ.ಎನ್.ಡಿ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.</p></div>

ಮುರುಡೇಶ್ವರದ ಕಡಲಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ಭಾನುವಾರ ಕರಾವಳಿ ಕಾವಲು ಪಡೆಯ ಕೆ.ಎನ್.ಡಿ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

   

ಭಟ್ಕಳ: ಮುರುಡೇಶ್ವರದ ಕಡಲಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ಭಾನುವಾರ ಕರಾವಳಿ ಕಾವಲು ಪಡೆಯ ಕೆ.ಎನ್.ಡಿ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮುರುಡೇಶ್ವರ ಪ್ರವಾಸಕ್ಕೆ ಆಗಮಿಸಿದ ಬೆಂಗಳೂರಿನ ನಿವಾಸಿ ಪುನೀತ್ ಕೆ. (19) ತನ್ನ ಸ್ನೇಹಿತರೊಂದಿಗೆ ಕಡಲಿನಲ್ಲಿ ಈಜಲು ತೆರಳಿದ್ದರು, ಈಜು ಬಾರದ ಪುನೀತ್ ಸಮುದ್ರದ ಅಲೆಗೆ ಸಿಕ್ಕು ಕೊಚ್ಚಿಕೊಂಡು ಹೋಗುವಾಗ ಕೆ.ಎನ್.ಡಿ ಸಿಬ್ಬಂದಿ ಯೊಗೇಶ ಹರಿಕಾಂತ ಹಾಗೂ ಲಕ್ಷ್ಮಣ ಹರಿಕಾಂತ ಅವರು ಯೊಗೇಶನ ತಂದೆಯ ಪಾತಿ ದೋಣಿ ತೆಗೆದುಕೊಂಡು ಪುನೀತನನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ.

ADVERTISEMENT

ಕಳೆದ ವಾರ ಬೆಂಗಳೂರಿನ ವಿದ್ಯಾರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಕಡಲ ಪ್ರವೇಶಕ್ಕೆ ನಿರ್ಭಂದ ಹೇರಲಾಗಿತ್ತು. ಶನಿವಾರ ದೇವಸ್ಥಾನ ಎಡಭಾಗದ ಬದಲಿಗೆ ಬಲಭಾಗದಲ್ಲಿ ಮೀನುಗಾರಿಕೆ ನಡೆಸುವ ಕಡಲ ತೀರ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿತ್ತು. ಆದರೆ ಪ್ರವಾಸಿಗರ ರಕ್ಷಣೆಗೆ ಅವಶ್ಯ ಇರುವ ಸ್ಪೀಡ್ ಬೋಡ್, ಜೀವರಕ್ಷಕ ಸಾಮಗ್ರಿ ನೀಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.