ADVERTISEMENT

ಕಾರವಾರ | ಕಾಡುಹಂದಿ ಹತ್ಯೆ ಪ್ರಕರಣ; ಮತ್ತೊಂದು ನಾಡಬಾಂಬ್ ನಿಷ್ಕ್ರೀಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 17:01 IST
Last Updated 6 ಆಗಸ್ಟ್ 2023, 17:01 IST
ಕಾರವಾರ ತಾಲ್ಲೂಕಿನ ಚೆಂಡಿಯಾದಲ್ಲಿ ನಾಡಬಾಂಬ್ ನಿಷ್ಕ್ರೀಯಗೊಳಿಸುವಲ್ಲಿ ಬಾಂಬ್ ಪತ್ತೆ ದಳದ ಸಿಬ್ಬಂದಿ ನಿರತರಾಗಿದ್ದರು
ಕಾರವಾರ ತಾಲ್ಲೂಕಿನ ಚೆಂಡಿಯಾದಲ್ಲಿ ನಾಡಬಾಂಬ್ ನಿಷ್ಕ್ರೀಯಗೊಳಿಸುವಲ್ಲಿ ಬಾಂಬ್ ಪತ್ತೆ ದಳದ ಸಿಬ್ಬಂದಿ ನಿರತರಾಗಿದ್ದರು   

ಕಾರವಾರ: ತಾಲ್ಲೂಕಿನ ಚೆಂಡಿಯಾ ಗ್ರಾಮದ ಸ್ಮಶಾನದ ಬಳಿ ಕಾಡುಪ್ರಾಣಿ ಹತ್ಯೆಗೆ ಇಡಲಾಗಿದ್ದ ನಾಡಬಾಂಬ್‍‍ ಅನ್ನು ಮಂಗಳೂರಿನ ಬಾಂಬ್ ಪತ್ತೆ ದಳದ ಸಿಬ್ಬಂದಿ ಭಾನುವಾರ ಹಲವು ತಾಸುಗಳ ಕಾರ್ಯಾಚರಣೆ ಬಳಿಕ ನಿಷ್ಕ್ರೀಯಗೊಳಿಸಿದರು.

ಶುಕ್ರವಾರ ರಾತ್ರಿ ಇಲ್ಲಿ ಕೋಳಿಮಾಂಸದಲ್ಲಿ ನಾಡಬಾಂಬ್ ಇಟ್ಟು ಕಾಡುಹಂದಿಯನ್ನು ಹತ್ಯೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರ ಸ್ಥಳೀಯ ನಿವಾಸಿ ಸಿಫ್ರನ್ ಥಾಮಸ್ ಫರ್ನಾಂಡಿಸ್ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಘಟನೆ ನಡೆದ ಸ್ಥಳದಲ್ಲೇ ಇನ್ನೊಂದು ಬಾಂಬ್ ಇಟ್ಟಿದ್ದಾಗಿ ಆತ ಮಾಹಿತಿ ನೀಡಿದ್ದ.

ಜನರು ಓಡಾಟ ನಡೆಸುವ ಪ್ರದೇಶದ ಬಳಿಯೇ ನಾಡಬಾಂಬ್ ಇರುವ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಅದನ್ನು ನಿಷ್ಕ್ರೀಯಗೊಳಿಸಲು ಬಾಂಬ್ ಪತ್ತೆ ದಳ ಕರೆಯಿಸಲಾಗಿತ್ತು.  

ADVERTISEMENT

‘ಸಜೀವ ನಾಡಬಾಂಬ್ ಕುರಿತು ಮಾಹಿತಿ ನೀಡಿ ಒಂದು ದಿನದ ಬಳಿಕ ಅದನ್ನು ನಿಷ್ಕ್ರೀಯಗೊಳಿಸುವ ಪ್ರಕ್ರಿಯೆ ನಡೆದಿದೆ’ ಎಂದು ಸ್ಥಳೀಯರು ಬೇಸರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.