ADVERTISEMENT

ಸಿಡಿಲು ಬಡಿದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 23:18 IST
Last Updated 17 ನವೆಂಬರ್ 2024, 23:18 IST

ಶಿರಸಿ: ತಾಲ್ಲೂಕಿನ ಬನವಾಸಿಯಲ್ಲಿ ಜಯಂತಿ ಪ್ರೌಢಶಾಲೆ ಸಮೀಪ ಶನಿವಾರ ಸಂಜೆ ಕ್ರಿಕೆಟ್‌ ಆಡುವಾಗ, ಸಿಡಿಲು ಬಡಿದು ಸಾಜಿದ್ ಅಷ್ಪಾಕ್ ಅಲಿ ಶೇಖ್ (17) ಎಂಬ ಬಾಲಕ ಮೃತಪಟ್ಟಿದ್ದಾನೆ.

‘ಸಿಡಿಲಿನ ಅಬ್ಬರಕ್ಕೆ ಹೆದರಿ ಸ್ನೇಹಿತರು ಓಡಿದರು. ಸಾಜಿದ್ ಅಲ್ಲಿಯೇ ಕುಸಿದು ಬಿದ್ದ. ಆತನನ್ನು ತಕ್ಷಣವೇ ಶಿರಸಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು’ ಎಂದು ಬನವಾಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT