ADVERTISEMENT

ಪದೇಪದೇ ‘ಮೌನ’ವಾಗುವ ಸ್ಥಿರ ದೂರವಾಣಿ

ಮೊಗಟಾ ಗ್ರಾಮದ ವಿವಿಧೆಡೆ ಸಮಸ್ಯೆ: ಮೊಬೈಲ್ ಟವರ್‌ ನಿರ್ಮಾಣಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 19:31 IST
Last Updated 9 ಅಕ್ಟೋಬರ್ 2019, 19:31 IST
ಅಂಕೋಲಾ ತಾಲ್ಲೂಕಿನ ಕಡಕೋಡದಲ್ಲಿರುವ ದೂರವಾಣಿ ವಿನಿಮಯ ಕೇಂದ್ರ
ಅಂಕೋಲಾ ತಾಲ್ಲೂಕಿನ ಕಡಕೋಡದಲ್ಲಿರುವ ದೂರವಾಣಿ ವಿನಿಮಯ ಕೇಂದ್ರ   

ಕಾರವಾರ: ಅಂಕೋಲಾ ತಾಲ್ಲೂಕಿನ ಮೊಗಟಾ ಗ್ರಾಮದ ಬ್ರಹ್ಮೂರು ಸುತ್ತಮುತ್ತ ಸುಮಾರು ಎರಡು ತಿಂಗಳಿನಿಂದ ಬಿ.ಎಸ್‌.ಎನ್.ಎಲ್ ಸ್ಥಿರ ದೂರವಾಣಿ ಪದೇಪದೇ ಕಾರ್ಯ ಸ್ಥಗಿತವಾಗುತ್ತಿದೆ. ಇದರಿಂದ ಭಾರಿ ತೊಂದರೆಯಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.

ಬ್ರಹ್ಮೂರು, ಕಬಗಾಲ, ಕಡಕೋಡ ಭಾಗದಲ್ಲಿ ಸುಮಾರು 150 ಸಂಪರ್ಕಗಳಿವೆ. ಇಲ್ಲಿ ಒಮ್ಮೆ ದೂರವಾಣಿ ನಿಷ್ಕ್ರಿಯಗೊಂಡರೆ ಎರಡು ದಿನಪೂರ್ತಿ ದುರಸ್ತಿಯಾಗುತ್ತಿಲ್ಲ. ಈಭಾಗಗಳಲ್ಲಿ ಬಿಎಸ್‌ಎನ್‌ಎಲ್‌ಸೇರಿದಂತೆ ಯಾವುದೇ ಮೊಬೈಲ್ ಆಪರೇಟರ್‌ಗಳ ಟವರ್ ಕೂಡ ಇಲ್ಲ. ಹಾಗಾಗಿಹೊರಜಗತ್ತನ್ನುಸಂಪರ್ಕಿಸಲು ಸ್ಥಿರ ದೂರವಾಣಿಯನ್ನೇ ಅವಲಂಬಿಸಬೇಕು.ಯಾವುದೇ ಕೆಲಸ ಕಾರ್ಯಗಳು ಆಗಬೇಕಾದರೂ ದೂರವಾಣಿ ಮುಖಾಂತರವೇ ಆಗಬೇಕು. ದಿನಗಟ್ಟಲೆ ಸಂಪರ್ಕ ಕಡಿತಗೊಂಡರೆ ಸಮಸ್ಯೆಗಳು ತಪ್ಪಿದ್ದಲ್ಲ ಎನ್ನುತ್ತಾರೆ ಗ್ರಾಮಸ್ಥ ಸುಬ್ರಾಯ ಹೆಗಡೆ,ಸೋಮಶೇಖರ ನಾಯ್ಕ, ಕಮಲಾಕರ ಮರಾಠಿ.

‘ಗುಡುಗು, ಮಿಂಚು ಕಾಣಿಸಿಕೊಂಡ ಸಂದರ್ಭದಲ್ಲಿ ದೂರವಾಣಿಸೇವೆಯನ್ನುನಿಷ್ಕ್ರಿಯಗೊಳಿಸುವುದುಸಹಜ. ಆದರೆ, ಅದನ್ನು ಪುನಃ ಆರಂಭಿಸಲು ದಿನಗಟ್ಟಲೆ ಬೇಕೇ ಎನ್ನುವುದು ಅವರ ಪ್ರಶ್ನೆಯಾಗಿದೆ. ದೂರವಾಣಿ ವಿನಿಮಯ ಕೇಂದ್ರಕ್ಕೆ ಕಾಯಂ ಸಿಬ್ಬಂದಿಯ ನಿಯೋಜನೆಯಾಗಿದೆ. ಆದರೂಕೆಲಸ ಕಾರ್ಯಗಳು ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ ಎಂದೂ ಬೇಸರಿಸುತ್ತಾರೆ.

ADVERTISEMENT

ಸಿಬ್ಬಂದಿ ಕೊರತೆ: ಈ ಬಗ್ಗೆ ಪ್ರತಿಕ್ರಿಯಿಸಿದ ಬಿ.ಎಸ್.ಎನ್.ಎಲ್‌ ತಾಂತ್ರಿಕ ಅಧಿಕಾರಿ ಸಂದೀಪ, ‘ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು,ಆಪ್ಟಿಕಲ್ ಫೈಬರ್ ಕೇಬಲ್‌ ತುಂಡಾಗುತ್ತಿದೆ. ಹಾನಿಯಾದ ಜಾಗವನ್ನು ಹುಡುಕುವುದಕ್ಕೆ ಕೆಲವೊಮ್ಮೆ ಒಂದೆರಡು ದಿನಳೂಬೇಕಾಗುತ್ತವೆ. ಸಿಬ್ಬಂದಿ ಕೊರತೆಯಿಂದ ಕೆಲವೊಮ್ಮೆ ಸಮಸ್ಯೆ ಬಿಗಡಾಯಿಸುತ್ತದೆಎಂದರು.

ಮಿನಿ ಟವರ್‌ ನಿರ್ಮಿಸಲು ಒತ್ತಾಯ:

ಬ್ರಹ್ಮೂರು, ಕಬಗಾಲ, ಕಡಕೋಡ, ಗಡಗಾರ, ಬೇಣದಳ್ಳಿ, ಹೀಗೆ ಹಲವು ಮಜರೆಗಳನ್ನು ಸೇರಿಸಿದರೆ 1,000ಕ್ಕೂ ಹೆಚ್ಚು ಜನಸಂಖ್ಯೆಯಿದೆ. ಮೊಗಟಾ ಗ್ರಾಮದ ವ್ಯಾಪ್ತಿಯಲ್ಲಿ ಒಂದೂ ಮೊಬೈಲ್ ಟವರ್ ಇಲ್ಲ. ಮೊಬೈಲ್‌ನಿಂದ ಕರೆ ಮಾಡಲು11 ಕಿ.ಮೀ. ದೂರದ ಮಿರ್ಜಾನ್‌ ತನಕ ಬರಬೇಕು.

ದಟ್ಟಾರಣ್ಯದಿಂದ ಕೂಡಿದ ಯಾಣದಲ್ಲಿ ಕೆಲವು ವರ್ಷಗಳ ಹಿಂದೆ 15 ಮೀಟರ್ಎತ್ತರದ ಮಿನಿ ಟವರ್ ನಿರ್ಮಿಸಲಾಗಿತ್ತು.ಈ ಭಾಗಕ್ಕೂಅಂಥದ್ದೇಮಿನಿ ಟವರ್ ಮಾಡಿದರೆ ಅನುಕೂಲವಾಗುತ್ತದೆ ಎಂಬುದು ಹಲವರ ಅಭಿಪ್ರಾಯ.

‘ಮೊಬೈಲ್ ಟವರ್ ನಿರ್ಮಿಸಿದರೆ ಪ್ರತಿ ತಿಂಗಳು ನಿರ್ವಹಣೆಗೆ ಸಾಕಷ್ಟು ವ್ಯಯಿಸಬೇಕಾಗುತ್ತದೆ. ಜನಸಂಖ್ಯೆ ಹಾಗೂ ಲಾಭ–ನಷ್ಟಗಳನ್ನು ಪರಿಗಣಿಸಿ ಟವರ್ ನಿರ್ಮಾಣದ ಬಗ್ಗೆ ಯೋಚಿಸಬಹುದು’ ಎನ್ನುವುದು ಸಂಸ್ಥೆಯ ತಾಂತ್ರಿಕ ಅಧಿಕಾರಿ ಸಂದೀಪ್ಅವರ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.