ಕಾರವಾರ: ಆನ್‍ಲೈನ್ ಟ್ರೇಡಿಂಗ್ ಮೂಲಕ ಲಾಭದ ಆಸೆ ತೋರಿಸಿ ಹೊನ್ನಾವರದ ಉದ್ಯಮಿಯೊಬ್ಬರಿಗೆ ಸೈಬರ್ ವಂಚಕರು ₹41.27 ಲಕ್ಷ ವಂಚನೆ ಮಾಡಿರುವುದಾಗಿ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮೂಲದ, ಸದ್ಯ ಹೊನ್ನಾವರದಲ್ಲಿ ವಾಸವಿರುವ ಕೆ.ಕೃಷ್ಣಕಾಂತ್ ವಂಚನೆಗೆ ಒಳಗಾದ ಉದ್ಯಮಿ. ಮೊಬೈಲ್‍ನಲ್ಲಿ ಬಂದ ಜಾಹೀರಾತು ನಂಬಿ ವಾಟ್ಸ್‌ಆ್ಯಪ್ ಗುಂಪೊಂದಕ್ಕೆ ಸೇರಿ ಆನ್‍ಲೈನ್ ಟ್ರೇಡಿಂಗ್ ಆರಂಭಿಸಲಾಗಿತ್ತು. ಗುಂಪಿನ ಎಡ್ಮಿನ್ ಮಾತು ನಂಬಿ ₹41.27 ಲಕ್ಷ ಹೂಡಿಕೆ ಮಾಡಲಾಗಿತ್ತು. ನನ್ನ ಖಾತೆಗೆ ₹1.60 ಕೋಟಿ ಲಾಭ ಬಂದಿರುವುದಾಗಿ ಮಾಹಿತಿ ತೋರಿಸುತ್ತಿತ್ತು. ಆದರೆ ಹಣವನ್ನು ನೀಡುವಂತೆ ಎಡ್ಮಿನ್ ಬಳಿ ವಿಚಾರಿಸಿದಾಗ ಗುಂಪಿನಿಂದ ಹೊರ ಹಾಕಿದ್ದಲ್ಲದೆ, ಸಂಪರ್ಕ ಕಡಿದುಕೊಂಡರು. ಹೂಡಿಕೆ ಮಾಡಿದ್ದ ಹಣವನ್ನೂ ಹಿಂದಿರುಗಿಸಿಲ್ಲ ಎಂದು ಕೃಷ್ಣಕಾಂತ್ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.