ADVERTISEMENT

ಕಾರವಾರ ಕಡಲ ತೀರದಲ್ಲಿ ಮತ್ತೊಂದು ಡಾಲ್ಫಿನ್ ಸಾವು

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 15:33 IST
Last Updated 10 ಜುಲೈ 2022, 15:33 IST
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಭಾನುವಾರ ಕಂಡುಬಂದ ಡಾಲ್ಫಿನ್‌ನ ಕಳೇಬರ
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಭಾನುವಾರ ಕಂಡುಬಂದ ಡಾಲ್ಫಿನ್‌ನ ಕಳೇಬರ   

ಕಾರವಾರ: ನಗರದ ಸುತ್ತಮುತ್ತ ಡಾಲ್ಫಿನ್‌ ಮೀನುಗಳ ಅಸಹಜ ಸಾವಿನ ಸರಣಿ ಮುಂದುವರಿದಿದೆ. ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಭಾನುವಾರ ಮತ್ತೊಂದು ಡಾಲ್ಫಿನ್‌ನ ಕಳೇಬರ ಕಂಡುಬಂದಿದೆ.

‘ಇಂಡೊ ಪೆಸಿಫಿಕ್ ಹಂಪ್‌ಬ್ಯಾಕ್’ ಪ್ರಬೇಧದ ಡಾಲ್ಫಿನ್ ಇದಾಗಿದ್ದು, ಸುಮಾರು ಏಳು ಅಡಿಗಳಷ್ಟು ಉದ್ದವಿತ್ತು. ಶರೀರದ ಒಂದಷ್ಟು ಭಾಗ ಕೊಳೆತಿದ್ದು, ಮೃತಪಟ್ಟು ಕೆಲವು ದಿನಗಳಾಗಿರುವ ಸಾಧ್ಯತೆಯಿದೆ. ಮೀನುಗಾರರ ಬಲೆಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಮೋದ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.