ಕಾರವಾರ: ಇಲ್ಲಿಗೆ ಅರಬ್ಬಿ ಸಮುದ್ರದ 50 ನಾಟಿಕಲ್ ಮೈಲಿ ದೂರದಲ್ಲಿ ಶುಕ್ರವಾರ ಬೆಂಕಿ ಅವಘಡಕ್ಕೆ ತುತ್ತಾಗಿದ್ದ ಮಲೇಶಿಯಾದ ಮಾರ್ಸ್ಕ್ ಫ್ರಾಂಕ್‌ಫರ್ಟ್ ಸರಕು ಸಾಗಣೆ ಹಡಗನ್ನು ಭಾರತೀಯ ಕರಾವಳಿ ಕಾವಲು ಪಡೆ ರಕ್ಷಿಸಿದೆ.
ಗುಜರಾತ್‍ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಕ್ಕೆ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ 1,154 ಕಂಟೈನರ್ ನಲ್ಲಿ ಬೆಂಜೀನ್ ಮತ್ತು ಸೋಡಿಯಂ ಸೈನೇಟ್‌ನಂತಹ ಅಪಾಯಕಾರಿ ಸರಕುಗಳಿದ್ದವು ಎಂದು ತಟರಕ್ಷಕ ಪಡೆ ತಿಳಿಸಿದೆ.
‘ಶುಕ್ರವಾರ ಮಧ್ಯಾಹ್ನ 2.10ರ ಸುಮಾರಿಗೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂತು.
ಕಾರ್ಯಾಚರಣೆಗೆ ಮೊದಲು ‘ಸಚೇತ್’ ಹಡಗು ಬಳಸಲಾಯಿತು. ನಂತರ ‘ಸುಜೀತ್’ ಮತ್ತು ‘ಸಾಮ್ರಾಟ್’ ಹಡಗು ಬಳಸಿ ಕಾರ್ಯಾರಣೆ ಮುಂದುವರೆಸಿದೆವು ಎಂದು’ ತಟರಕ್ಷಕ ಪಡೆಯು ‘ಎಕ್ಸ್’ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.