ADVERTISEMENT

ಹಣ ಮರಳಿಸದ ಬ್ಯಾಂಕ್ ವಿರುದ್ಧ ದೂರು: ದತ್ತಾ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:43 IST
Last Updated 13 ಜೂನ್ 2024, 14:43 IST

ಪ್ರಜಾವಾಣಿ ವಾರ್ತೆ

ಕಾರವಾರ: ‘ಉಳಿತಾಯ ಖಾತೆಯಲ್ಲಿದ್ದ ಹಣ ಮರಳಿಸಲು ಸತಾಯಿಸುತ್ತಿರುವ ಕಾರವಾರ ಅರ್ಬನ್ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದೇನೆ’ ಎಂದು ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ದತ್ತಾ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖಾತೆಯಲ್ಲಿರುವ ಸುಮಾರು ₹4 ಲಕ್ಷ ಹಿಂಪಡೆಯಲು ಚೆಕ್ ನೀಡಿ ವಿನಂತಿಸಿದಾಗ ಹಣ ನೀಡಲು ನಿರಾಕರಿಸಿದ್ದಾರೆ. ಬ್ಯಾಂಕಿಗೆ ವಂಚನೆಯಾಗಿದೆ, ಹಣ ಈಗ ಕೊಡಲು ಸಾಧ್ಯವಿಲ್ಲ ಎಂದು ಬ್ಯಾಂಕಿನ ವ್ಯವಸ್ಥಾಪಕರು ಹೇಳಿದ್ದರು. ನನ್ನಂತೆ ಹಲವರಿಗೆ ಇದೇ ರೀತಿ ಅನ್ಯಾಯವಾಗಿದೆ. ಈ ಕಾರಣಕ್ಕಾಗಿ ಪೊಲೀಸ್ ದೂರು ದಾಖಲಿಸಿದ್ದೇನೆ’ ಎಂದರು.

ADVERTISEMENT

‘ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಸ್ವಾರ, ನಿರ್ದೇಶಕರು, ವ್ಯವಸ್ಥಾಪಕ ವಾಸುದೇಗ ಪಂಗಮ್, ಸಿಬ್ಬಂದಿ ವಿರುದ್ದವೂ ದೂರು ನೀಡಲಾಗಿದೆ’ ಎಂದರು.

‘ಬ್ಯಾಂಕಿನ ಆಡಳಿತ ಮಂಡಳಿ ಮೃತಪಟ್ಟವರು, ನಿವೃತ್ತ ಸಿಬ್ಬಂದಿ ಮೇಲೆ ಆರೋಪ ಹೊರಿಸುತ್ತಿದೆ. ಮೇಲ್ನೋಟಕ್ಕೆ ನೋಡಿದರೆ ಎರಡು ವರ್ಷಗಳಿಂದ ಈಚೆಗೆ ವಂಚನೆ ನಡೆದಿರುವುದು ಕಾಣಸಿಗುತ್ತಿದೆ. ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗದೆ ಸೂಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಅರವಿಂದ ಗುನಗಿ, ಸುನೀಲ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.