ADVERTISEMENT

ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ: ಸಂತೋಷ್ ವರಕ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 13:47 IST
Last Updated 26 ಜೂನ್ 2024, 13:47 IST
ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ ವತಿಯಿಂದ ದನಗರಗೌಳಿ‌ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿನಿ ಜನ್ನಾಬಾಯಿ ಜಾನು ಕೋಕರೆಯನ್ನು ಸನ್ಮಾನಿಸಲಾಯಿತು
ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ ವತಿಯಿಂದ ದನಗರಗೌಳಿ‌ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿನಿ ಜನ್ನಾಬಾಯಿ ಜಾನು ಕೋಕರೆಯನ್ನು ಸನ್ಮಾನಿಸಲಾಯಿತು   

ಯಲ್ಲಾಪುರ: ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 95.66 ಅಂಕಗಳಿಸಿದ ದನಗರಗೌಳಿ‌ ಸಮುದಾಯಲ್ಲಿಯೇ ಹೆಚ್ಚು ಅಂಕ ಪಡೆದ ತಾಲ್ಲೂಕಿನ ಬೈಲಂದೂರು ಗೌಳಿವಾಡ ಗ್ರಾಮದ ಜನ್ನಾಬಾಯಿ ಜಾನು ಕೋಕರೆಗೆ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ ವತಿಯಿಂದ ಸೋಮವಾರ ಸನ್ಮಾನಿಸಲಾಯಿತು.

ದನಗರಗೌಳಿ ಯುವ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಸಂತೋಷ್ ವರಕ್ ಮಾತನಾಡಿ, ‘ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದ ಗೌಳಿ ಸಮುದಾಯ ಇಂದು ಶಿಕ್ಷಣ ಕ್ಷೇತ್ರದಲ್ಲಿ ಇತರೆ ಸಮುದಾಯಗಳು ಹುಬ್ಬೇರಿಸುವಂತ ಸಾಧನೆ ಮಾಡುತ್ತಿರುವುದು ಶ್ಲಾಘನೀಯ. ಶಿಕ್ಷಣದಿಂದ ಮಾತ್ರ ಸಮಾಜ ಬದಲಾಗಲು ಸಾಧ್ಯ. ಹಾಗಾಗಿ ಸಮುದಾಯದ ಎಲ್ಲರೂ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆ ಉಪಾಧ್ಯಕ್ಷ ಬಾಬು ಶೇಂಡಗೆ, ಖಜಾಂಚಿ ಭರತ್ ಕೋಕರೆ, ಸದಸ್ಯ ಬಮ್ಮು ಫೋಂಡೆ, ಪ್ರಮುಖರಾದ ಬಮ್ಮು ಬಿಚ್ಚುಕಲೆ, ಬಕ್ಕು ತೋರತ್, ಜಾವು ಪಟಕಾರೆ, ಶಿಕ್ಷಕ ನಾರಾಯಣ ಕಾಂಬಳೆ, ಚಿಚ್ಚು ಎಡಗೆ ಹೊಸಳ್ಳಿ ಇದ್ದರು. ರವಿ ಶಿಂಧೆ ನಿರೂಪಿಸಿದರು. ಗೌರಿ ಬಕ್ಕು ತೋರತ್ ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.