ADVERTISEMENT

ಸಿದ್ದಾಪುರ: ಹಾರ್ಸಿಕಟ್ಟಾ ಸೇವಾ ಸಹಕಾರಿ ಸಂಘಕ್ಕೆ ₹6.85 ಲಕ್ಷ ಲಾಭ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 13:57 IST
Last Updated 21 ಸೆಪ್ಟೆಂಬರ್ 2024, 13:57 IST
ಸಿದ್ದಾಪುರ ತಾಲ್ಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಂಘದ ಮೂಲಕ ಹೆಚ್ಚು ಮಹಸೂಲು ವಿಕ್ರಿಮಾಡಿದ ಸದಸ್ಯರನ್ನು ಸನ್ಮಾನಿಸಲಾಯಿತು
ಸಿದ್ದಾಪುರ ತಾಲ್ಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಂಘದ ಮೂಲಕ ಹೆಚ್ಚು ಮಹಸೂಲು ವಿಕ್ರಿಮಾಡಿದ ಸದಸ್ಯರನ್ನು ಸನ್ಮಾನಿಸಲಾಯಿತು   

ಸಿದ್ದಾಪುರ: ತಾಲ್ಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ ₹ 6.85 ಲಕ್ಷ ನಿವ್ವಳ ಲಾಭ ಹೊಂದಿದ್ದು ಸಂಘದ ಬೆಳವಣಿಗೆಗೆ ಪರಸ್ಪರ ಸಹಕಾರ ಮುಖ್ಯ ಎಂದು ಸಂಘದ ಅಧ್ಯಕ್ಷ ಮಹಾಬಲೇಶ್ವರ ದೇವರು ಭಟ್ಟ ಅಗ್ಗೇರೆ ಹೇಳಿದರು.

ಸಂಘದ ನಿವೇಶನದ ಗೋದಾಮಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಶುಕ್ರವಾರ ಮಾತನಾಡಿದರು.

ಸಂಘದಲ್ಲಿ 891 ಸದಸ್ಯರಿದ್ದು ₹1ಕೋಟಿ ಷೇರು ಬಂಡಾಳ ಹೊಂದಿದೆ. ₹2 ಕೋಟಿ  ಠೇವಣಿಯನ್ನು ಹೊಂದಿದೆ. ಸಂಘದ ಸದಸ್ಯರ ಹಿತದೃಷ್ಠಿಯಿಂದ ಸಾಮಾನ್ಯ ಸೇವಾ ಕೇಂದ್ರ, ಆರ್‌ಟಿಜಿಎಸ್ ಹಾಗೂ ನೆಫ್ಟ್‌ ಸೇವೆ ನೀಡಲಾಗುತ್ತಿದೆ ಎಂದರು.

ADVERTISEMENT

ನಿರ್ದೇಶಕರಾದ ಎ.ಜಿ.ಹೆಗಡೆ ಹಿರೇಕೈ, ಎ.ಆರ್.ಹೆಗಡೆ ಹೀನಗಾರ, ನಾಗರಾಜ ಹೆಗಡೆ ಹುಲಿಮನೆ, ಮಂಜುನಾಥ ನಾಯ್ಕ ತೆಂಗಿನಮನೆ, ವಿ.ಎಚ್.ಗೌಡ ಮಾದ್ಲಮನೆ, ಸುಮಾ ಹೆಗಡೆ ಹೊನ್ನೆಹದ್ದ, ನಾಗರಾಜ ಹೆಗಡೆ ಹೊಲಗದ್ದೆ, ಸುಧಾಕರ ಹರಿಜನ ಹೊನ್ನೆಹದ್ದ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಂಘದ ಮೂಲಕ 2023-24ನೇ ಸಾಲಿನಲ್ಲಿ ಹೆಚ್ಚು ಮಹಸೂಲು ವಿಕ್ರಿಮಾಡಿದ ಸದಸ್ಯರಾದ ಭಾಸ್ಕರ ಸೂರಪ್ಪ ಹೆಗಡೆ ಅರಿಶಿನಗೋಡ, ಶ್ರೀಪಾದ ರಾಮ ಭಟ್ಟ ತಟ್ಟೀಸರ ಹಾಗೂ ಹುಲಿಯಾ ನಾರಾಯಣ ಗೌಡ ಕಲ್ಮನೆ ಇವರನ್ನು ಸನ್ಮಾನಿಸಲಾಯಿತು.

ನಿರ್ದೇಶಕ ಅನಂತ ಹೆಗಡೆ ಗೊಂಟನಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ ಕೃಷ್ಣ ಹೆಗಡೆ ವರದಿ ವಾಚಿಸಿದರು. ಉಪಾಧ್ಯಕ್ಷೆ ಇಂದಿರಾ ಜಿ.ಹೆಗಡೆ ವಂದಿಸಿದರು. ಅನಂತ ಹೆಗಡೆ ಹೊಸಗದ್ದೆ ನಿರ್ವಹಿಸಿದರು. ಸಿಬ್ಬಂದಿ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.