ADVERTISEMENT

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‍ನಿಂದ ಅಪಪ್ರಚಾರ: ನಾಗರಾಜ ನಾಯಕ ಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2024, 16:24 IST
Last Updated 4 ಮೇ 2024, 16:24 IST
ನಾಗರಾಜ ನಾಯಕ
ನಾಗರಾಜ ನಾಯಕ   

ಕಾರವಾರ: ‘ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಸಲಾಗದು ಎಂಬುದು ಅರಿವಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಅನಾಮಧೇಯ ವ್ಯಕ್ತಿಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲು ಮುಂದಾಗಿದೆ’ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಪ್ರತಿನಿಧಿ ನಾಗರಾಜ ನಾಯಕ ಹೇಳಿದರು‌.

‘ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಇಲ್ಲಸಲ್ಲದ ವದಂತಿ ಹಬ್ಬಿಸಲು ಪ್ರಯತ್ನಿಸಲಾಗುತ್ತಿದೆ. ಇಂತಹ ಕೃತ್ಯಕ್ಕಾಗಿ ಕಾಂಗ್ರೆಸ್ ಕೆಲ ವ್ಯಕ್ತಿಗಳಿಗೆ ಹೊರಗುತ್ತಿಗೆ ನೀಡಿದೆ. ಸುಳ್ಳು ಪೋಸ್ಟ್ ಗಳ ಸೃಷ್ಟಿಕರ್ತರಿಗೆ ಕಾನೂನು ಚೌಕಟ್ಟಿನಡಿಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದೇವೆ’ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಾಮಾಜಿಕ ಜಾಲತಾಣಗಳ ಮೇಲೆ ಜಿಲ್ಲಾ ಚುನಾವಣಾಧಿಕಾರಿ ನಿಗಾ ಇಡುತ್ತಿಲ್ಲ. ಅದಕ್ಕಾಗಿಯೇ ತೇಜೋವಧೆ ಪೋಸ್ಟ್ ಹೆಚ್ಚುತ್ತಿವೆ. ಕೂಡಲೇ ಅವರು ನಿಗಾ ಇಡಬೇಕು’ ಎಂದು ಒತ್ತಾಯಿಸಿದರು‌.

ADVERTISEMENT

‘ಒಂದು ಕಡೆ ಗ್ಯಾರಂಟಿ ಹೆಸರಿನಲ್ಲಿ ಜನರ ದುಡ್ಡನ್ನು ದೋಚಿ ಅಲ್ಪ ಮೊತ್ತ ನೀಡಲಾಗುತ್ತಿದೆ. ಇದೊಂದು ರೀತಿಯಲ್ಲಿ ಜೇಬು ಕಳ್ಳತನ ಮಾಡಿದಂತೆ’ ಎಂದು ವ್ಯಂಗ್ಯವಾಡಿದರು.

ಸಂಜಯ ಸಾಳುಂಕೆ, ನಯನಾ ನೀಲಾವರ, ರೇಷ್ಮಾ ಮಾಳ್ಸೇಕರ, ರಾಜು ಭಂಡಾರಿ, ನಾಗೇಶ ಕುರ್ಡೇಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.