ADVERTISEMENT

ಭಟ್ಕಳ: ಖರೀದಿ ಜಾಗವನ್ನು ಶಾಲೆಗೆ ದಾನ ನೀಡಿದ ದಂಪತಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:16 IST
Last Updated 23 ಜೂನ್ 2024, 16:16 IST
ಖರೀದಿಸಿದ 4 ಗುಂಟೆ ಜಾಗದ ಶಾಲೆಯ ಹೆಸರಿಗೆ ಪಹಣಿ ಪತ್ರ ತಯಾರಿಸಿ ಮಾದೇವ ನಾಯ್ಕ ಮುಖ್ಯ ಶಿಕ್ಷಕಿಗೆ ಹಸ್ತಾಂತರಿಸಿದರು
ಖರೀದಿಸಿದ 4 ಗುಂಟೆ ಜಾಗದ ಶಾಲೆಯ ಹೆಸರಿಗೆ ಪಹಣಿ ಪತ್ರ ತಯಾರಿಸಿ ಮಾದೇವ ನಾಯ್ಕ ಮುಖ್ಯ ಶಿಕ್ಷಕಿಗೆ ಹಸ್ತಾಂತರಿಸಿದರು   

ಭಟ್ಕಳ: ಭೂಮಿ ಖರೀದಿಸಿದ ಸ್ಥಳದಲ್ಲಿ ಶಾಲೆ ಇರುವುದನ್ನು ಮನಗಂಡ ಉದ್ಯಮಿಯೊಬ್ಬರು ಶಾಲೆಗೆ ನಾಲ್ಕು ಗುಂಟೆ ಸ್ಥಳವನ್ನು ದಾನವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಬೆಳಕೆ ಕಲಬಂಡಿಯ ಮಾದೇವ ನಾಯ್ಕ ದಂಪತಿ ಈಚೆಗೆ ಸ್ಥಳವೊಂದನ್ನು ಖರೀದಿಸಿದ್ದರು. ತಾವು ಖರೀದಿಸಿದ ಸ್ಥಳದಲ್ಲಿ ಹೇರಬುಡಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇರುವುದನ್ನು ಮನಗಂಡ ಇವರು ಶಾಲೆ ಇರುವ ನಾಲ್ಕು ಗುಂಟೆ ಸ್ಥಳವನ್ನು ದಾನವಾಗಿ ನೀಡಲು ನಿರ್ಧರಿಸಿ ಅಗತ್ಯದ ಕಾಗಪತ್ರಗಳನ್ನು ತಾವೇ ತಯಾರಿಸಿ ಶಾಲೆಗೆ ಹಸ್ತಾಂತರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಬೆಳಕೆ ನೂಜ ಮಜಿರೆಯ ಹೇರಬುಡಕಿ ಸರ್ಕಾರಿ ಕಿರಿಯ ಪ್ರಥಮಿಕ ಶಾಲೆಯು 1992ರಿಂದಲೂ ಖಾಸಗಿ ಜಾಗದಲ್ಲಿ ನಡೆಯುತ್ತಿತ್ತು. ಅಂದಿನಿಂದಲೇ ಜಾಗವನ್ನು ಶಾಲೆಗೆ ಹಸ್ತಾಂತರ ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದರೂ ಅದು ಫಲಪ್ರದವಾಗಿರಲಿಲ್ಲ. ಗ್ರಾಮೀಣ ಭಾಗದ ಶಾಲೆಯಾದ್ದರಿಂದ ಇಲ್ಲಿಗೆ ಬರುವ ಮಕ್ಕಳೂ ಗ್ರಾಮೀಣ ಭಾಗದಿಂದಲೇ ಬರುವವರಾಗಿದ್ದು ಅವರಿಗೆ ಯಾವುದೇ ತೊಂದರೆಯಾಗಬಾರದು, ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂ ಉದ್ದೇಶದಿಂದ  ಮಾದೇವ ನಾಯ್ಕ ದಂಪತಿ ಜಾಗವನ್ನು ದಾನವಾಗಿ ನೀಡಿದ್ದಾರೆ.
ಈಚೆಗೆ ಶಾಲೆಗೆ ತೆರಳಿದ್ದ ಮಾದೇವ ನಾಯ್ಕ ದಂಪತಿ ಶಾಲೆಯ ಪಹಣಿ ಪತ್ರವನ್ನು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.  ಮುಖ್ಯ ಶಿಕ್ಷಕಿ ಆಫ್ರಿನ್ ಶೇಖ, ಸಹ ಶಿಕ್ಷಕಿ ಸವಿತಾ ನಾಯ್ಕ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.