ADVERTISEMENT

ಕಾರವಾರ| ಚಿಕನ್ ತುಟ್ಟಿ, ಮೊಟ್ಟೆಗೆ ಬೇಡಿಕೆ; ದಿನಸಿ ದರದಲ್ಲಿ ಮುಂದುವರಿದ ಏರಿಳಿತ

ತರಕಾರಿ ದರ ಸ್ಥಿರ: ಮೀನು ಮಾರುಕಟ್ಟೆ ಸಂಪೂರ್ಣ ಬಂದ್

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 12:22 IST
Last Updated 23 ಜನವರಿ 2020, 12:22 IST
ಕಾರವಾರ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಾಯುತ್ತಿರುವ ಹಣ್ಣಿನ ವ್ಯಾಪಾರಿ
ಕಾರವಾರ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಾಯುತ್ತಿರುವ ಹಣ್ಣಿನ ವ್ಯಾಪಾರಿ   

ಕಾರವಾರ: ನಗರದಲ್ಲಿ ಮೊಟ್ಟೆಗೆ ಭಾರೀ ಬೇಡಿಕೆ ಬಂದಿದೆ. ಆದರೆ, ಪ್ರತಿ ವಾರ ಪೂರೈಕೆಯಾಗುತ್ತಿದ್ದ ಪ್ರಮಾಣಕ್ಕಿಂತ ಹೆಚ್ಚು ಆವಕವಾಗಿರುವ ಕಾರಣ ದರದಲ್ಲಿ ಇಳಿಕೆಯಾಗಿದೆ.

ಈಮೊದಲುಸಗಟು ಮಾರುಕಟ್ಟೆಯಲ್ಲಿ ಒಂದು ಡಜನ್‌ಗೆ₹ 60ರ ದರವಿತ್ತು. ಈಗ₹ 56ಕ್ಕೆ ಇಳಿಕೆ ಕಂಡಿದೆ. ಫಾರಂ ಕೋಳಿಯ ದರ ₹ 180ರಿಂದ₹ 200ಕ್ಕೇರಿದೆ. ಮಟನ್ ಪ್ರತಿ ಕೆ.ಜಿ.ಗೆ₹ 600ರಲ್ಲಿ ಸ್ಥಿರವಾಗಿದೆ. ಚಿಕನ್₹ 20ರಷ್ಟು ಏರಿಕೆಯಾಗಿ₹ 200ರಲ್ಲಿ ಬಿಕರಿಯಾಗುತ್ತಿದೆ.

ದಿನಸಿಯಲ್ಲಿ ಸ್ವಸ್ತಿಕ್ ಅಕ್ಕಿಯ ದರ ಕಡಿಮೆಯಾಗಿದೆ. 25 ಕೆ.ಜಿ.ಯ ಚೀಲಕ್ಕೆ₹ 1,100 ಇತ್ತು. ಸದ್ಯ₹ 1,000 ಇದೆ. ಹೊಸ ಅಕ್ಕಿಗೆ₹ 900 ಇದೆ. ಪಾಮಾಯಿಲ್ ಎಣ್ಣೆ ಲೀಟರ್‌ಗೆ ₹ 100ಇದ್ದರೆ ಸೂರ್ಯಕಾಂತಿ ಎಣ್ಣೆ₹ 110ರಿಂದ₹ 120ಕ್ಕೆ ಏರಿಕೆಯಾಗಿದೆ. ಹಿಂದಿನ ವಾರ ಗಮನಾರ್ಹ ಏರಿಕೆ ಕಂಡಿದ್ದ ಬ್ಯಾಡಗಿ ಮೆಣಸು ಸದ್ಯ₹ 250ರಿಂದ₹ 220ಕ್ಕೆ ಇಳಿಕೆಯಾಗಿದೆ. ಹಸಿರು ಬಟಾಣಿ₹ 20ರಷ್ಟು ಏರಿಕೆಯಾಗಿದ್ದು ಪ್ರತಿ ಕೆ.ಜಿ.ಗೆ₹ 160ರ ದರವಿದೆ.₹ 36ಕ್ಕೆ ಸಿಗುತ್ತಿದ್ದ ಗೋಧಿಯ ದರ ₹ 40ಕ್ಕೇರಿದೆ.

ADVERTISEMENT

ತರಕಾರಿ ಮಾರುಕಟ್ಟೆಯ ದರ ಸ್ಥಿರವಾಗಿದ್ದು, ಈರುಳ್ಳಿ ₹ 60, ಬೆಳಗಾವಿ ಟೊಮೆಟೋ ₹ 30, ಜವಾರಿ ಟೊಮೆಟೋ ₹ 20, ಆಲೂಗಡ್ಡೆ ₹ 40, ಕ್ಯಾರೆಟ್ ₹ 80, ಹೂಕೋಸು ₹ 30, ಬೆಳ್ಳುಳ್ಳಿ ₹ 200, ಬೀನ್ಸ್ ₹ 60ರ ದರದಲ್ಲಿಬಿಕರಿಯಾಗುತ್ತಿವೆ.

ಸೇವಂತಿಗೆ ಹೂವು ಮತ್ತು ಕಾಕಡ ಮಲ್ಲಿಗೆಯು ಒಂದು ಮಾರಿಗೆ₹ 50, ಕನಕಾಂಬರ₹ 60, ಗೊಂಡೆ ಹೂವು₹ 40, ಡೇರೆ ಹೂವು₹ 60ರ ದರ ಹೊಂದಿವೆ. ಹೂವಿನ ಹಾರ ಒಂದಕ್ಕೆ₹ 60ರಂತೆ ಮಾರಾಟವಾಗುತ್ತಿದೆ.

ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು ಪ್ರತಿ ಕೆ.ಜಿ.ಗೆ ₹ 100, ₹ 120, ₹ 150ರವರೆಗೂ ಇದೆ. ಇರಾನಿ ಸೇಬು ತುಟ್ಟಿಯಾಗಿದ್ದು ₹ 200ರಲ್ಲಿ ಗ್ರಾಹಕ ಕೊಂಡುಕೊಳ್ಳುತ್ತಿದ್ದಾನೆ. ಕಿತ್ತಳೆ₹ 80ರಿಂದ ₹ 90ರವರೆಗಿನ ದರದಲ್ಲಿ ವಹಿವಾಟು ಕಾಣುತ್ತಿದೆ. ಬಿಳಿ ದ್ರಾಕ್ಷಿಗೆ ₹ 160, ಕಪ್ಪು ದ್ರಾಕ್ಷಿಗೆ ₹ 180 ಇದೆ. ಮೂಸಂಬಿಯ ದರ ₹ 120ರಿಂದ ₹ 80ಕ್ಕೆ ಇಳಿಕೆ ಕಂಡಿದೆ.

ಪೂರೈಕೆ ಇಳಿಕೆ, ದರ ಏರಿಕೆ:ಕಾರವಾರದಲ್ಲಿ ‘ಸಾಗರಮಾಲಾ’ ಯೋಜನೆಯ ವಿರುದ್ಧ ಮೀನುಗಾರರು 11 ದಿನಗಳಿಂದ ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ.ಜೊತೆಗೆ ತಾಲ್ಲೂಕಿನೆಲ್ಲೆಡೆ ಮೀನು ಮಾರಾಟವನ್ನು ಸ್ಥಗಿತಗೊಳಿಸಿದ್ದಾರೆ.

ಇದರಿಂದ ಕೆಲವು ದಿನ ಕಾರವಾರಿಗರು ಗೋವಾ ಹಾಗೂ ಅಂಕೋಲಾ ಭಾಗಗಳಿಗೆ ಹೋಗಿ ಮೀನು ಖರೀದಿಸಿದ್ದರು. ಒಂದೆರಡು ದಿನಗಳಿಂದ ನಗರದ ಹೊರಭಾಗಗಳಲ್ಲಿ ಕೆಲವರು ಬೇರೆಡೆಯಿಂದ ತಂದು ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದಾರೆ.

₹ 400ರ ದರವಿದ್ದ ಪಾಂಫ್ರೆಟ್‌ಒಂದಕ್ಕೆ ₹ 600ರಿಂದ₹ 700ರವರೆಗೂ ಇದೆ. ಬಂಗಡೆ ಮೀನು₹ 100ಕ್ಕೆ ಮೂರು ಸಿಗುತ್ತಿದ್ದವು. ಆದರೆ, ಮೂರು ಮೀನಿಗೆಈಗ ₹ 200ರವರೆಗೂ ದರವೇರಿದೆ.

ಅಂಕಿ ಅಂಶ
ಕಾರವಾರ ಮಾರುಕಟ್ಟೆ

ತರಕಾರಿ;ದರ (₹ಗಳಲ್ಲಿ)

ಆಲೂಗಡ್ಡೆ;40

ಟೊಮೆಟೊ;20

ಕ್ಯಾರೆಟ್;80

ಬೀಟ್‌ರೂಟ್;60

ಕ್ಯಾಪ್ಸಿಕಂ;60

ಮೆಣಸಿನಕಾಯಿ;60

ಶುಂಠಿ;100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.