ADVERTISEMENT

‘ದಲಿತರ ನಡೆ ಮುರ್ಡೇಶ್ವರ ಕಡೆ’ ನವೆಂಬರ್ 21ಕ್ಕೆ

ಸುಳ್ಳು ಜಾತಿ ಪ್ರಮಾಣ ಪತ್ರದ ವಿರುದ್ಧ ಹೋರಾಟ:ತುಳಸಿದಾಸ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:19 IST
Last Updated 19 ನವೆಂಬರ್ 2024, 14:19 IST
<div class="paragraphs"><p>ಪ್ರತಿಭಟನೆ</p></div>

ಪ್ರತಿಭಟನೆ

   

– ಪ್ರಜಾವಾಣಿ ಚಿತ್ರ

ಕಾರವಾರ: ‘ಪರಿಶಿಷ್ಟರಲ್ಲದ ಮೊಗವೀರರು ನೈಜ ಪರಿಶಿಷ್ಟರಿಗೆ ಸಿಗಬೇಕಾದ ಸಂವಿಧಾನಬದ್ಧ ಸೌಲಭ್ಯಗಳನ್ನು ಕಸಿದುಕೊಂಡಿದ್ದಾರೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬೆಂಬಲವಾಗಿ ನಿಂತಿದ್ದಾರೆ. ಇದರ ವಿರುದ್ಧ ನ.21 ರಂದು ‘ದಲಿತರ ನಡೆ ಮುರ್ಡೇಶ್ವರ ಕಡೆ’ ಹೆಸರಿನಲ್ಲಿ ಹೋರಾಟ ನಡೆಸುತ್ತೇವೆ’ ಎಂದು ಉತ್ತರ ಕನ್ನಡ ಜಿಲ್ಲಾ ಅನುಸೂಚಿತ ಜಾತಿ, ಪಂಗಡಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣಾ ಒಕ್ಕೂಟದ ಅಧ್ಯಕ್ಷ ತುಳಸಿದಾಸ ಪಾವುಸ್ಕರ ಹೇಳಿದರು.

ADVERTISEMENT

‘ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮುರ್ಡೇಶ್ವರಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ಪರಿಶಿಷ್ಟರಿಗೆ ಉಂಟಾಗುತ್ತಿರುವ ಅನ್ಯಾಯದ ಕುರಿತು ಅವರ ಗಮನ ಸೆಳೆಯಲಾಗುವುದು’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

‘ಕೆಲ ದಶಕಗಳಿಂದ ಮೊಗವೀರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದು ಸ್ಥಗಿತವಾಗಿದೆ. ಈಗಾಗಲೆ ಸಾವಿರಾರು ಜನರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದೆ. ಅವರು ಸೌಲಭ್ಯ ಪಡೆದುಕೊಂಡಿದ್ದಾರೆ. ಗ್ರಾಮ ಒಕ್ಕಲಿಗ ಸಮುದಾಯಕ್ಕೆ ಸೇರಿದ ಗೊಂಡರು ಕೂಡ ಸುಳ್ಳು ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ’ ಎಂದು ದೂರಿದರು.

‘ಪರಿಶಿಷ್ಟರ ಹಕ್ಕುಗಳನ್ನು ಕಸಿಯುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಅವರ ವಿರುದ್ದವೂ ಹೋರಾಟ ನಡೆಸುತ್ತೇವೆ’ ಎಂದರು.

ಪ್ರಧಾನ ಕಾರ್ಯದರ್ಶಿ ರವೀಂದ್ರ ಮಂಗಳ, ಪ್ರಮುಖರಾದ ದೀಪಕ ಕುಡಾಳಕರ, ಕಿರಣ ಶಿರೂರು, ಗೋವಿಂದ ಮುಕ್ರಿ, ಘನಶ್ಯಾಮ ಪಾಠಣಕರ, ಸುಭಾಷ ಕಾನಡೆ, ರಾಜೇಂದ್ರ ಮಾದರ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.