ADVERTISEMENT

ಕಾರವಾರ: ಮಹಿಳಾ ಮತಗಟ್ಟೆ ಸಿಬ್ಬಂದಿಗೆ ಆರತಿ ಬೆಳಗಿದ ಡಿ.ಸಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 14:10 IST
Last Updated 25 ಏಪ್ರಿಲ್ 2024, 14:10 IST
ಮಹಿಳಾ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲಿರುವ ಸಿಬ್ಬಂದಿಯೊಬ್ಬರಿಗೆ ಕಾರವಾರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೀರೆ ವಿತರಿಸಿ, ಆರತಿ ಬೆಳಗಿದರು
ಮಹಿಳಾ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಲಿರುವ ಸಿಬ್ಬಂದಿಯೊಬ್ಬರಿಗೆ ಕಾರವಾರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೀರೆ ವಿತರಿಸಿ, ಆರತಿ ಬೆಳಗಿದರು   

ಕಾರವಾರ: ಲೋಕಸಭೆ ಚುನಾವಣೆ ವೇಳೆ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಒಂದರಂತೆ ತೆರೆಯಲ್ಪಡುವ ಮಹಿಳಾ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಏಕರೂಪ ವಸ್ತ್ರ ಧರಿಸಲು ಜಿಲ್ಲಾಧಿಕಾರಿ ಸೂಚಿಸಿದ್ದು, ಗುರುವಾರ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿರುವ ಸಿಬ್ಬಂದಿಗೆ ತಾವೇ ಹಸಿರು ಬಳೆ ತೊಡಿಸಿ, ಸೀರೆಗಳನ್ನು ವಿತರಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಹಿಳಾ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಹಸಿರು ಗಾಜಿನ ಬಳೆಗಳು, ಹಸಿರು ಬಣ್ಣದ ಸೀರೆ ಮತ್ತು ಅದಕ್ಕೆ ಒಪ್ಪುವ ರವಿಕೆಯನ್ನು ನೀಡಿದರು. ಅಲ್ಲದೇ, ಹಣೆಗೆ ಅರಿಶಿಣ ಕುಂಕುಮ ಇಟ್ಟು, ಆರತಿ ಬೆಳಗಿ ಗೌರವಿಸಿದರು.

ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಮಹಿಳಾ ಮತದಾರರು ಅಧಿಕವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ತಲಾ ಮೂರು ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿ ಮಹಿಳೆಯರೇ ಆಗಿರಲಿದ್ದಾರೆ. ಪ್ರತಿ ಮಹಿಳಾ ಮತಗಟ್ಟೆಗೆ 4 ರಿಂದ 5 ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ADVERTISEMENT

‘ಮಹಿಳಾ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳ ಜತೆಗೆ, ಮಹಿಳೆಯರೊಂದಿಗೆ ಆಗಮಿಸುವ ಚಿಕ್ಕ ಮಕ್ಕಳಿಗೆ ಕಾಳಜಿಗೆ ಸಹ ವಿಶೇಷ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.