ADVERTISEMENT

ಹೊನ್ನಾವರ: ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಾಮೂಹಿಕ ರಾಜೀನಾಮೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:45 IST
Last Updated 19 ಜೂನ್ 2024, 15:45 IST
<div class="paragraphs"><p>ಕಾಂಗ್ರೆಸ್, ಎಎಪಿ</p></div>

ಕಾಂಗ್ರೆಸ್, ಎಎಪಿ

   

ಹೊನ್ನಾವರ: ‘ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಗದೀಪ ತೆಂಗೇರಿ ಸೇರಿದಂತೆ ಪಕ್ಷದ ಪ್ರಾಮಾಣಿಕ, ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಜೊತೆಗೆ ಪಕ್ಷಕ್ಕಾಗಿ ದುಡಿಯದ ಅನಾಮಧೇಯ ವ್ಯಕ್ತಿಗಳಿಗೆ ಮಣೆ ಹಾಕುತ್ತಿರುವ ಧೋರಣೆಯನ್ನು ವಿರೋಧಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್‌ನ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಂಬೋದರ ನಾಯ್ಕ ತಿಳಿಸಿದರು.

ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ADVERTISEMENT

ಜಗದೀಪ ತೆಂಗೇರಿ ಮಾತನಾಡಿ, ‘ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ತಾಲ್ಲೂಕು ಭೂ ನ್ಯಾಯ ಮಂಡಳಿಗೆ ಬಿಸಿಸಿಯ ಒಬ್ಬನೇ ಒಬ್ಬ ಕಾರ್ಯಕರ್ತನನ್ನು ನಾಮ ನಿರ್ದೇಶನ ಮಾಡಿಲ್ಲ. ಪಕ್ಷದ ಪ್ರಾಥಮಿಕ ಸದಸ್ಯತ್ವ ಕೂಡ ಪಡೆಯದ ವಿ.ಕೆ. ವಿಶಾಲ್ ಅವರನ್ನು ಜಿಲ್ಲಾ ಕೆಡಿಪಿಗೆ ಸರ್ಕಾರದ ನಾಮ ನಿರ್ದೆಶಿತ ಸದಸ್ಯರನ್ನಾಗಿ ನೇಮಕಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದ ತುಳಸೀ ಗೌಡ, ಸುರೇಶ ಮೇಸ್ತ, ಸುಧಾ ನಾಯ್ಕ, ಜ್ಯೋತಿ ಮಹಾಲೆ, ಕೇಶವ ಮೇಸ್ತ,ಶ್ ರೀಕಾಂತ ಮೇಸ್ತ, ಸವಿತಾ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.