ADVERTISEMENT

'ಶಿರೂರು ಗುಡ್ಡದಿಂದ ನದಿಯಲ್ಲಿ ಸೃಷ್ಟಿಯಾದ ದಿಬ್ಬ ತೆರವುಗೊಳಿಸಿ'

ಬಿಜೆಪಿ ರೈತ ಮೋರ್ಚಾದಿಂದ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:09 IST
Last Updated 19 ಅಕ್ಟೋಬರ್ 2024, 13:09 IST
ಶಿರೂರಿನ ಗಂಗಾವಳಿ ನದಿಯಲ್ಲಿ ತುಂಬಿರುವ ಕಲ್ಲು ಮಣ್ಣುಗಳ ರಾಶಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ಅಂಕೋಲಾ ತಾಲ್ಲೂಕು ಘಟಕದಿಂದ ತಹಶೀಲ್ದಾರ್‌ ಅನಂತ ಶಂಕರ ಬಿ. ಅವರಿಗೆ ಮನವಿ ಸಲ್ಲಿಸಲಾಯಿತು
ಶಿರೂರಿನ ಗಂಗಾವಳಿ ನದಿಯಲ್ಲಿ ತುಂಬಿರುವ ಕಲ್ಲು ಮಣ್ಣುಗಳ ರಾಶಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ಅಂಕೋಲಾ ತಾಲ್ಲೂಕು ಘಟಕದಿಂದ ತಹಶೀಲ್ದಾರ್‌ ಅನಂತ ಶಂಕರ ಬಿ. ಅವರಿಗೆ ಮನವಿ ಸಲ್ಲಿಸಲಾಯಿತು    

ಅಂಕೋಲಾ: ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ತುಂಬಿರುವ ಕಲ್ಲು ಮಣ್ಣುಗಳ ರಾಶಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ತಾಲ್ಲೂಕು ಘಟಕದಿಂದ ಶನಿವಾರ ತಹಶೀಲ್ದಾರ್‌ ಅನಂತ ಶಂಕರ ಬಿ. ಅವರಿಗೆ ಮನವಿ ಸಲ್ಲಿಸಲಾಯಿತು.

‘ಗುಡ್ಡ  ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ನಡುಗಡ್ಡೆಗಳಂತೆ ಮಣ್ಣಿನ ದಿಬ್ಬಗಳು ನಿರ್ಮಾಣವಾಗಿದ್ದು, ನದಿಯಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಸಣ್ಣ ಮಳೆ ಸುರಿದರೂ ಪ್ರವಾಹ ಭೀತಿ ಎದುರಾಗುತ್ತಿದೆ. ದಿಬ್ಬಗಳನ್ನು ಹಾಗೆಯೇ ಬಿಟ್ಟರೆ ಮಳೆಗೆ ಉಂಟಾಗುವ ನೆರೆಯಿಂದಾಗಿ ಸುಮಾರು 6 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ನಾಶವಾಗುವ ಸಂಭವ ಇದೆ’ ಎಂದು ದೂರಿದರು.

‘ಕೇರಳದ ಅರ್ಜುನ್ ಶೋಧಕ್ಕೆ ನೀಡಿರುವ ಮಹತ್ವವನ್ನು ಸ್ಥಳೀಯರ ಶೋಧಕ್ಕೆ ರಾಜ್ಯ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ನೀಡಿಲ್ಲ. ದುರ್ಘಟನೆಯಲ್ಲಿ ಕಣ್ಮರೆಯಾದ ಸ್ಥಳೀಯರ ಪತ್ತೆ ಕಾರ್ಯ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ನದಿಯಲ್ಲಿ ತುಂಬಿರುವ ಮಣ್ಣು ತೆರವು ಮಾಡುವುದು ಸರ್ಕಾರ ಮತ್ತು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದರೂ ಕಾರ್ಯಾಚರಣೆಯನ್ನು ಕೈ ಬಿಡಲಾಗಿದೆ. ಗಂಗಾವಳಿ ನದಿಯಲ್ಲಿ ತುಂಬಿರುವ ಮಣ್ಣು ತೆರುವು ಕಾರ್ಯಾಚರಣೆಗೆ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ರೈತ ಮೋರ್ಚಾ ಜಿಲ್ಲಾ ಘಟಕದ ಕಾರ್ಯದರ್ಶಿ ವಿ.ಎಸ್.ಭಟ್ಟ ಕಲ್ಲೇಶ್ವರ, ಪ್ರಮುಖರಾದ ಭಾಸ್ಕರ ನಾರ್ವೇಕರ್, ನಿತ್ಯಾನಂದ ಗಾಂವಕರ್, ರಾಮಚಂದ್ರ ಹೆಗಡೆ, ಬಿಂದೇಶ ನಾಯಕ, ಮಂಜುನಾಥ ಹೆಗಡೆ, ಆರತಿ ಗೌಡ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.