ADVERTISEMENT

ಧನ್ವಂತರಿ ಮಹೋತ್ಸವ 8ರಿಂದ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 14:28 IST
Last Updated 28 ನವೆಂಬರ್ 2023, 14:28 IST

ಹೊನ್ನಾವರ: ಶ್ರೀ ಧನ್ವಂತರಿ ಪುರಶ್ಚರಣ ಮಹಾಯಾಗ ಮಹೋತ್ಸವ ಸಮಿತಿಯ ವತಿಯಿಂದ ಧನ್ವಂತರಿ ಪುರಶ್ಚರಣ ಮಹಾಯಾಗ ಹಾಗೂ ಧನ್ವಂತರಿ ಜಯಂತಿ ಮಹೋತ್ಸವ ಖರ್ವಾ ಗ್ರಾಮದ ಯಲಗುಪ್ಪದಲ್ಲಿರುವ ಧನ್ವಂತರಿ ದೇವಸ್ಥಾನದಲ್ಲಿ ಡಿ.8ರಿಂದ 10ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

8ರಂದು ಬೆಳಿಗ್ಗೆ ಧನ್ವಂತರಿ ಜಪ ಆರಂಭವಾಗುವುದು. ಸಂಜೆ 5ಕ್ಕೆ ಯೋಗೀಶ ರಾಯ್ಕರ ಉಪ್ಪೋಣಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ತಾರಾ ಭಟ್ಟ ಮತ್ತು ವಾಗ್ದೇವಿ ಭಜನಾ ಮಂಡಳಿಯ ಕಲಾವಿದರಿಂದ ಭಕ್ತಿ ಸಂಗೀತ ಹಾಗೂ ಶಿವಾನಂದ ಭಟ್ಟ ಹಡಿನಬಾಳ ಅವರಿಂದ ಸುಗಮ ಸಂಗೀತ ನಡೆಯಲಿದೆ.

9 ರಂದು ಧನ್ವಂತರಿ ಮಹಾಯಾಗ ಆರಂಭಗೊಳ್ಳುವುದು. ಸಂಜೆ 4.30ಕ್ಕೆ ಚಾಂದನಿ ಗರ್ತಿಕೆರೆ ಅವರಿಂದ ಸುಗಮ ಸಂಗೀತ ನಡೆಯಲಿದೆ.

ADVERTISEMENT

10ರಂದು ಬೆಳಿಗ್ಗೆ 9.30ಕ್ಕೆ ಅಶೋಕ ಹುಗ್ಗಣ್ಣವರ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವರು. ವಿಧಾನಸಭೆಯ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ದಿನಕರ ಕೆ.ಶೆಟ್ಟಿ, ಕೆ.ಜೆ.ಮಳಗಿ, ಟಿಎಪಿಸಿಎಂಎಸ್ ಅಧ್ಯಕ್ಷ ದೀಪಕ ನಾಯ್ಕ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ಅನಂತಮೂರ್ತಿ ಹೆಗಡೆ ಶಿರಸಿ ಭಾಗವಹಿಸುವರು. ಅಶೋಕ ಹುಗ್ಗಣ್ಣವರ, ನಾಟಿ ವೈದ್ಯ ಶೀನಪ್ಪ ಹಾಗೂ ಪಾರಂಪರಿಕ ವೈದ್ಯ ಚಿದಂಬರ ಭಾಗ್ವತ ಅವರನ್ನು ಸನ್ಮಾನಿಸಲಾಗುವುದು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.